ಸಂಕ್ಷಿಪ್ತ ಸುದ್ದಿ
ಹೋಮಿಯೋಪತಿ ಚಿಕಿತ್ಸಾ ಶಿಬಿರ
ಯಾದಗಿರಿ: ಗುಲ್ಬರ್ಗ ನಗರದ ರಾಮಮಂದಿರ ಎದರಿನ ಧನ್ವಂತರಿ ಆಸ್ಪತ್ರೆಯಲ್ಲಿ ಉಚಿತ ಹೋಮಿಯೊಪತಿ ಚಿಕಿತ್ಸಾ ಶಿಬರವನ್ನು ಆ. 4ರಂದು ಬೆ.10ರಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಕೀಲುನೋವು, ಸ್ನಾಯು ಸೆಳೆತ, ಮಂಡಿ ನೋವು, ಬೆನ್ನು ನೋವು, ಸ್ಟಾಂಡಿಲೈಟಿನ್, ಆತ್ರಾಟಿಸ್ ರೋಗಳಿಗೆ ಸಂಬಂಧಿಸಿದಂತೆ ಹೀಟ್ ಥೆರಫಿ, ಆಯಿಲ್ ಮಸಾಜ್ ಸೇರಿದಂತೆ ಇತರ ರೋಗಗಳ ಬಗ್ಗೆ ಉಚಿತ ಮಾಹಿತಿ, ಸಲಹೆಗಳನ್ನು ನೀಡಲಾಗುವುದು. ಥೈರಾಯ್ಡ್, ಸಕ್ಕರೆ ಕಾಯಿಲೆ, ಬಿಪಿ, ನಿದ್ರಾಹೀನತೆ, ಅಸ್ತಮಾ, ಬಂಜೆತನ, ಮುಟ್ಟಿನ ಸಮಸ್ಯೆ, ಗರ್ಭಕೋಶದ ತೊಂದರೆ, ಮೂಲವ್ಯಾದಿ, ಕೂದಲು ಉದುರುವಿಕೆ, ಕಿಡ್ನಿ ಮತ್ತು ಪಿತ್ತಕೋಶದಲ್ಲಿನ ಹರಳು ಇನ್ನಿತರ ತೊಂದರೆಗಳಿಗೆ ಡಾ. ಕೊಪ್ಪರ ಅವರು ಉಚಿತ ಚಿಕಿತ್ಸೆ ನೀಡಲಿದ್ದಾರೆ ಎಂದು ಡಾ. ಶ್ವೇತಾ ಜೆ.ಕೆ, ತಿಳಿಸಿದ್ದಾರೆ. ಕಾರಣ ಈ ಶಿಬಿರದ ಲಾಭವನ್ನು ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯ ಜನರು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಮಾಹಿತಿಗಾಗಿ ಮೊ. 8867192933 ಸಂಪರ್ಕಿಸಲು ಕೋರಿದ್ದಾರೆ..
ರಂಗಂಪೇಟೆ; ತಾ. ಮಟ್ಟಕ್ಕೆ ಆಯ್ಕೆ
ಸುರಪುರ: ಸಮೀಪದ ರಂಗಂಪೇಟೆಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಎಲ್ಲಮ್ಮ ಗೋವಿಂದಪ್ಪ ಗದ್ವಾಲ್ ಹೋಬಳಿ ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಪ್ರತಿಷ್ಠಾಪನೆ ನಾಳೆ
ಸುರಪುರ: ತಾಲೂಕಿನ ಚಿಕ್ಕನಳ್ಳಿ ಗ್ರಾಮದ ನಿರಗುಡಿ ಹವಾ ಮಲ್ಲಿನಾಥ ಆಶ್ರಮದಲ್ಲಿ ಆ.5ರಂದು ಬೆಳಗ್ಗೆ 7.20ಕ್ಕೆ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು ಭಾವಲಿಂಗ ಪ್ರತಿಷ್ಠಾಪನೆ ನೇರವೇರಿಸಲಿದ್ದಾರೆ. ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಭೆ ಇಂದು
ಸುರಪುರ: ಇಲ್ಲಿಯ ಸಮೀಪದ ರಂಗಂಪೇಟೆ ಬಸವೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಆ. 4ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಮಟ್ಟದ ವೀರಶೈವ ಸಮಿತಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಉಚಿತ ಪ್ರಸಾದ ನಿಲಯಕ್ಕೆ ವಿದ್ಯಾರ್ಥಿಗಳ ಆಯ್ಕೆ ಹಾಗೂ ಇನ್ನಿತರ ವಿಷಯಗಳನ್ನು ಚರ್ಚೆಯಾಗಲಿವೆ.
ರಂಗನಾಥ ಗುಡಿ ರಾಜ್ಯ
ಪರಿಷತ್ ಸದಸ್ಯರಾಗಿ ಆಯ್ಕೆ
ಸಿಂಧನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಆರೋಗ್ಯ ಇಲಾಖೆಯಿಂದ ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಸಹಾಯಕ ರಂಗನಾಥ ಗುಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದ ಪ್ರಥಮ ದರ್ಜೆ ಸಹಾಯಕ ಹುಸೇನಪ್ಪ ಅವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಭಿನಂದನೆ: ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ರಂಗನಾಥ ಗುಡಿ ಹಾಗೂ ಹುಸೇನಪ್ಪ ಅವರನ್ನು ಆರೋಗ್ಯ ಇಲಾಖೆಯ ಎಆರ್‌ಟಿ ಕೇಂದ್ರದ ಮಹಾಂತೇಶ ಅಭಿನಂದಿಸಿದ್ದಾರೆ.
ನಾಳೆ ವಿದ್ಯುತ್ ವ್ಯತ್ಯಯ
ರಾಯಚೂರು: ತುರ್ತು ಕೆಲಸದ ಹಿನ್ನೆಲೆ ನಗರದ ಕೆಲ ಭಾಗದಲ್ಲಿ ಆ. 5ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಗರದ ನಿಜಲಿಂಗಪ್ಪ ನಗರ, ವೆಂಕಟೇಶ್ವರ ಕಾಲನಿ, ಮಾರೆಮ್ಮ ಗುಡಿ, ಬಂದೇ ನವಾಜ್ ಕಾಲನಿ, ದೇವರಾಜ ಅರಸು ಕಾಲನಿ, ಬಸವೇಶ್ವರ ಕಾಲನಿ, ಮಹಾರಾಣಾ ಪ್ರತಾಪ ಕಾಲನಿ, ವಿವೇಕಾನಂದ ನಗರ, ನಿಜಾಮುದ್ದಿನ್ ಕಾಲನಿ, ಹೊಸೂರು, ಲಿಂಗಸ್ಗೂರು ರಸ್ತೆ, ಚೆಕ್ ಪೋಸ್ಟ್ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸ್ವಾತಂತ್ರ್ಯೋತ್ಸವ ಸಭೆ
ರಾಯಚೂರು: ನಗರದಲ್ಲಿ ಆ.15ರಂದು ಆಚರಿಸಲಾಗುವ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಆ.5ರಂದು ಸನ್ಮಾನ ಉಪ ಸಮಿತಿ ಸಭೆ ನಡೆಯಲಿದೆ. ಅಂದು ಸಂಜೆ 5ಕ್ಕೆ ಜಿಪಂ ಜಲ ನಿರ್ಮಲ ಸಭಾಂಗಣದಲ್ಲಿ ಎಸ್ಪಿ ಎಸ್.ಬಿ. ಬಿಸನಳ್ಳಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.