ಈದ್ ಸೌಹಾರ್ದ ಕೂಟ
ಸಿಂಧನೂರು: ರಂಜಾನ್ ತಿಂಗಳಲ್ಲಿ ಉಪವಾಸ ವ್ರತ ಆಚರಣೆ ಧಾರ್ಮಿಕವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಹಸಿವಿನ ನೋವು ಅರ್ಥವಾಗುತ್ತದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಲಾಲ್ ಹುಸೇನ್ ಕಂದಗಲ್ ಅಭಿಪ್ರಾಯಪಟ್ಟರು.
ನಗರದ ಪ್ರಶಾಂತನಗರದ ಹೊಸ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಈದ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು. ಉಪವಾಸ ಸಮಾಜ ಮತ್ತು ಇತಿಹಾಸ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಬಳಸಿದ ಅಸ್ತ್ರ ಉಪವಾಸ. ದೇವನು ಒಬ್ಬನೇ ಆಗಿದ್ದು, ಹುಟ್ಟುವ ಪ್ರತಿಯೊಬ್ಬರಿಗೂ ಮರಣ ಇರುವುದರಿಂದ ಬದುಕಿರುವಾಗಲೇ ಸಾರ್ಥಕ ಜೀವನ ನಡೆಸಿ, ಭಗವಂತನ ಪ್ರೀತಿಗೆ ಪಾತ್ರರಾಗಬೇಕೆಂದು ತಿಳಿಸಿದರು.
ಎಸ್ಡಿಎಂಟಿ ಪಾಲಿಟೆಕ್ನಿಕ್ ಕಾಲೇಜ್ ಆಡಳಿತಾಧಿಕಾರಿ ಶರಣು ಪಾ. ಹಿರೇಮಠ, ಶಿಕ್ಷಣ ಇಲಾಖೆಯ ನಿವೃತ್ತ ಸಮನ್ವಯಾಧಿಕಾರಿ ಎಚ್.ಜಿ. ಹಂಪಣ್ಣ ಮಾತನಾಡಿದರು. ನಗರಸಭೆ ಸದಸ್ಯರಾದ ಶರಣಬಸನಗೌಡ ಗೊರೇಬಾಳ, ಲಿಂಗರಾಜ ಗೊರೇಬಾಳ, ರುದ್ರಗೌಡ ಕಣ್ಣಿನ ಆಸ್ಪತ್ರೆಯ ಡಾ. ಚನ್ನನಗೌಡ, ಹುಸೇನಬಾಷ , ವೀರಭದ್ರಗೌಡ ಅಮರಾಪುರ, ದಿಲಾವರ ಅಂಬರ್ ಖಾನ್, ಮಹ್ಮದ್ ಮರೂಫ್, ಸಿಟಿ ಮೆಡಿಕಲ್ ಸ್ಟೋರ್ ಮಹ್ಮದ್ ದುಲಾಮಸಾಬ, ಖಾನ್ ಸಾಬ, ಬಿಎಸ್ಪಿ ಮರಿಯಪ್ಪ ಮತ್ತಿತರರು ಭಾಗವಹಿಸಿದ್ದರು.