ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾ.ಪಂ. ನಿರ್ಲಕ್ಷ್ಯ; ಭಯದ ಕರಿನೆರಳಿನಲ್ಲಿ ಪುಟಾಣಿಗಳು

Vishwanath S
Updated On : 7 Aug 2013, 11:08 am

ಮುದಗಲ್: ಸಮೀಪದ ಬನ್ನಿಗೋಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿಯವರು ಗೃಹ ಮತ್ತು ಶೌಚಾಲಯ ಉಪಯೋಗಿ ಸಾಮಗ್ರಿಗಳನ್ನು ಸಂಗ್ರಹ ಮಾಡಿದ್ದರಿಂದ ಅಂಗನವಾಡಿ ಕೇಂದ್ರದ ಶಿಶು ಮಕ್ಕಳು ಭಯದ ಕರಿನೆರಳಿನಲ್ಲಿ ಕೇಂದ್ರಕ್ಕೆ ತೆರಳುವಂತಾಗಿದೆ.                                                        
ಅಂಗನವಾಡಿ ಕೇಂದ್ರದಲ್ಲಿ ಬಾಲ ಮಕ್ಕಳು ಬರುವುದರಿಂದ ಪಟ್ಟಣದ ಸುತ್ತಮುತ್ತಲಿನ ವಾತವರಣ ಸ್ವಚ್ಛವಾಗಿಡಬೇಕು ಎಂಬುದು ಶಿಶು ಅಭಿವೃದ್ಧಿ ಇಲಾಖೆ ನಿಯಮ. ಆದರೆ ಕೇಂದ್ರದೊಳಗಡೆಯೇ ಗ್ರಾಪಂ ಆಡಳಿತ ಶೌಚಾಲಯಕ್ಕೆ ಬಳಸುವ ವಸ್ತುಗಳು, ಬಿದರು ಬೊಂಬುಗಳು, ಸಿಮೆಂಟ್ ಸಾಮಗ್ರಿಗಳು ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹ ಮಾಡಲಾಗಿದೆ. ಅಂಗನವಾಡಿ ಕೇಂದ್ರ ಸ್ವಚ್ಛವಾಗಿಡದ ಕಾರಣ ಕೇಂದ್ರದಲ್ಲಿ ಸಾಮಗ್ರಿಯಲ್ಲಿ ಹಾವು, ಚೇಳು ಮತ್ತಿತರೆ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಮಕ್ಕಳಲ್ಲಿ ಭಯದ ವಾತವರಣ ಉಂಟಾಗಿದೆ. ಕೇಂದ್ರದಲ್ಲಿ ಸಂಗ್ರಹ ವಸ್ತುಗಳನ್ನು ನೂತನವಾಗಿ ನಿರ್ಮಿಸಿದ ಗ್ರಾಪಂ ಕಟ್ಟಡ ವ್ಯರ್ಥವಾಗಿ ಬಿದ್ದದೆ. ಬೇರೆಡೆ ಸಂಗ್ರಹ ಮಾಡಲು ಗ್ರಾಪಂ ಮತ್ತು ತಾಪಂ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಅಂಗನವಾಡಿ ಕೇಂದ್ರದಲ್ಲಿ ಶೇಖರಿಸಿಡಲಾದ ಶೌಚಾಲಯದ ಸಾಮಗ್ರಿಗಳನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement