ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಳ ಸಕ್ರಮ ಮಾಡದಿದ್ದರೆ ಕ್ರಮ: ವಿಜಯಲಕ್ಷ್ಮೀ

Vishwanath S
Updated On : 8 Aug 2013, 12:08 pm

ಮುದಗಲ್: ಪಟ್ಟಣದಲ್ಲಿ ಅಧಿಕೃತ ನಳಗಳಿಗಿಂತ ಅನಧಿಕೃತ ನಳಗಳ ಸಂಖ್ಯೆ ಹೆಚ್ಚಾಗಿದ್ದು, ಅಕ್ರಮ ನಳ ಹೊಂದಿದವರು ಕೂಡಲೇ ಸಕ್ರಮಗೊಳಿಸಿಕೊಳ್ಳದಿದ್ದರೆ ಅಂಥವರ ನಳಗಳನ್ನು ಸ್ಥಗಿತಗೊಳಿಸುವುದಾಗಿ ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಶೇ. 50ರಷ್ಟು ಅನಧಿಕೃತ ನಳ ಮತ್ತು ಸಾರ್ವಜನಿಕ ನಳಗಳು ಇದ್ದುದರಿಂದ ನೀರು ಸರಬರಾಜಿನಲ್ಲಿ ತೊಂದರೆಗೆ ಕಾರಣವಾಗಿದೆ. ಅಲ್ಲದೆ ಅನಧಿಕೃತ ನಳ ಪಡೆದವರು ಮತ್ತು ಅಧಿಕೃತ ನಳ ಪಡೆದವರು ವಿದ್ಯುತ್ ಮೋಟಾರ್ ಅಳವಡಿಸುವ ಮೂಲಕ ನೀರು ಸರಬರಾಜಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಆದ್ದರಿಂದ ವಿದ್ಯುತ್ ಮೋಟಾರ್ ಅಳವಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಂಥವರ ನಳಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದರು.
ತಹಸೀಲ್ದಾರ್ ಆದೇಶ ಪಾಲನೆ: ಕುಡಿವ ನೀರು ಸಮಸ್ಯೆಗೆ ಕಾರಣವಾಗುವಂತೆ ಯಾವುದೇ ಕಾರಣಗಳಿದ್ದರೂ ಅವುಗಳನ್ನು ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ನಿರ್ದೇಶನದಂತೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಪಟ್ಟಣದ ವಾರ್ಡ್ 16ರಲ್ಲಿ ನಳಗಳಿಗೆ ನೀರು ಸರಬರಾಜು ಮಾಡುವ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರೆ ಇತ್ತ ವಾರ್ಡ್ 5ರಲ್ಲಿ ನೀರು ಸರಬರಾಜು ಸಂದರ್ಭದಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದು ಬೇಡ ಎನ್ನುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಅನುಕೂಲಕ್ಕೆ ಬೇಕಾದ ರೀತಿಯಲ್ಲಿ ನೀರು ಸರಬರಾಜಿಗೆ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement