ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ಪಪಂಗೆ ಮಹಿಳೆಯರ ಮುತ್ತಿಗೆ

Vishwanath S
Updated On : 8 Aug 2013, 12:08 pm

ಕನ್ನಡಪ್ರಭ ವಾರ್ತೆ ,  ಮುದಗಲ್ ,  ಆ.7
ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 16ರ ವೆಂಕಟರಾಯನ ಪೇಟೆ, ವಾರ್ಡ್ 5ರ ಜಾಡರಪೇಟೆಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ರೊಚ್ಚಿಗೆದ್ದ ಮಹಿಳೆಯರು ಪಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ವಾರ್ಡುಗಳಲ್ಲಿ ಅನೇಕರು ನಳಗಳಿಗೆ ಅನಧಿಕೃತವಾಗಿ ಮೋಟಾರ್ ಅಳವಡಿಸುತ್ತಿದ್ದರಿಂದ ಬಡವರ, ದಲಿತರ ಮನೆಗಳಗೆ ನೀರು ಬರುತ್ತಿಲ್ಲ. ಅಲ್ಲದೆ ಪಪಂ.ನವರು ಅನಧಿಕೃತವಾಗಿ ನಳಗಳನ್ನು ನೀಡಿದ್ದರಿಂದ ಅಧಿಕೃತ ನಳ ಹೊಂದಿದವರಿಗೆ ಸಮರ್ಪಕವಾಗಿ ನೀರು ಸಿಗುತ್ತಲ್ಲ ಎಂದು ಮಹಿಳೆಯರು ಆರೋಪಿಸಿದರು.
ಪ್ರತಿ ತಿಂಗಳು ತೆರಿಗೆ ಕಟ್ಟುವವರಿಗೆ ನೀರು ಬರುತ್ತಿಲ್ಲ, ತೆರಿಗೆ ಕಟ್ಟದ, ಅನಧಿಕೃತವಾಗಿ ನಳ ಪಡೆದವರಿಗೆ ನೀರು ಸರಬರಾಜು ಆಗುತ್ತವೆ ಎಂದು ದೂರಿದ ಮಹಿಳೆಯರು ತುಂಬಿದ ಕೊಡವನ್ನು ಪಪಂ ಮುಂಬಾಗಿಲಿಗೆ ಎಸೆದು ಆಕ್ರೋಶ ವ್ಯಕ್ತಡಿಸಿದರು.
ವಿದ್ಯುತ್ ಸಮಸ್ಯೆ: ಅದೇ ರೀತಿ ಜಾಡರಪೇಟೆಯ ಸಾರ್ವಜನಿಕರು ಪ್ರತಿಭಟನೆ ನಡೆಸಿ ಸಮರ್ಪಕ ನೀರು ಸರಬರಾಜಿಗೆ ಅಲ್ಲದೆ ನೀರು ಸರಬರಾಜು ಆಗುವ ವೇಳೆ ವಾರ್ಡ್ 16ರಲ್ಲಿ ವಿದ್ಯುತ್ ಕಡಿತಗೊಳಿಸುವಂತೆ ಮಹಿಳೆಯರು ಒತ್ತಾಯಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ ಮಾತನಾಡಿ, ವಾರ್ಡಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಕುಡಿವ ನೀರು ಸರಬರಾಜು ಯಾವ ಕಾರಣಕ್ಕೆ ಆಗುವುದಿಲ್ಲ ಎನ್ನುವುದನ್ನು ಮನಗಂಡು ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿ ಮುಖಂಡರಾದ ಶರಣಪ್ಪ ಕಟ್ಟಿಮನಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement