ಬಿಗ್ಬಾಸ್ ಹಣದಲ್ಲಿ ಉತ್ತರಾಖಂಡಕ್ಕೆ ನೆರವು: ವಿಜಯ್
ರಾಯಚೂರು: 'ಬಿಗ್ಬಾಸ್' ಕಾರ್ಯಕ್ರಮದ ಹಣ ಇನ್ನೂ ಕೈಸೇರಿಲ್ಲ. ಆ ಹಣದಿಂದ ಉತ್ತಾರಾಖಂಡ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಬೇಕೆಂಬ ಆಲೋಚನೆಯಿದೆ ಎಂದು 'ಬಿಗ್ಬಾಸ್' ವಿಜೇತ, ನಟ ವಿಜಯ ರಾಘವೇಂದ್ರ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಗ್ಬಾಸ್ ಕಾರ್ಯಕ್ರಮದಲ್ಲಿನ ಗೆಲವಿಗೆ ಘೋಷಿಸಿದ್ದ ಹಣ ಇನ್ನೂ ಕೈಸೇರಬೇಕಿದೆ. ಆನಂತರದಲ್ಲಿ ಆ ಹಣದಲ್ಲಿನ ಒಂದು ಪಾಲು ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದೇನೆ' ಎಂದು ಹೇಳಿದರು.