ಆರ್ಟಿಪಿಎಸ್ನ 7ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 7ನೇ ಘಟಕ ತಾಂತ್ರಿಕ ದೋಷದಿಂದ ಮಂಗಳವಾರ ಬೆಳಗ್ಗೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ವಿದ್ಯುತ್ ಕೇಂದ್ರದಲ್ಲಿ ಈಗಾಗಲೇ 1, 4 ಮತ್ತು 8ನೇ ಘಟಕಗಳು ವಿದ್ಯುತ್ಗೆ ತಗ್ಗಿದ ಬೇಡಿಕೆ, ವಾರ್ಷಿಕ ನಿರ್ವಹಣೆ ಸೇರಿ ವಿವಿಧ ಕಾರಣಗಳಿಗೆ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. ಸದ್ಯ 7ನೇ ಘಟಕದಲ್ಲಿ ಬಾಯ್ಲರ್ ಟ್ಯೂಬ್ ಸೋರಿಕೆಯಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಅದರಿಂದಾಗಿ ಈಗ ವಿದ್ಯುತ್ ಕೇಂದ್ರದ 2, 3, 5, 6ನೇ ಘಟಕಗಳಿಂದ ಮಂಗಳವಾರ ಬೆಳಗ್ಗೆವರೆಗೆ ಒಟ್ಟು 650 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.