ವಿವಿಧ ಯೋಜನೆ: ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದ ಫಲಾನುಭವಿಗಳಿಗಾಗಿ ನೇರ ಸಾಲದ ಯೋಜನೆ ಹಾಗೂ ಮೈಕ್ರೋಲೋನ್ ಯೋಜನೆಗಳಿಗೆ ಅರ್ಹರಿಂದ ಅರ್ಜಿ ಅಹ್ವಾನಿಸಲಾಗಿದೆ.ಅಪೇಕ್ಷೆಯುಳ್ಳ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 22 ಸಾವಿರ ರು.ಗಿಂತ ಕಡಿಮೆ ಇರಬೇಕು. 18ರಿಂದ 55 ವರ್ಷ ವಯೋವಾನದವರು ಅರ್ಜಿ ಸಲ್ಲಿಸಬಹುದು. ಮಹಿಳೆಯರಿಗೆ ಶೇ.33ರಷ್ಟು, ಅಂಗವಿಕಲರಿಗೆ ಶೇ.3ರಷ್ಟು ಮೀಸಲಾತಿಯಿದೆ.ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲಾತಿಗಳೊಂದಿಗೆ ಆ.29 ರೊಳಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಆಭಿವೃದ್ಧಿ ನಿಗಮ, ಅಮೀರ್ ಟ್ರೇಡಿಂಗ್ ಕಾಂಪ್ಲೆಕ್ಸ್, ಅರಬ್ ಮೊಹಲ್ಲಾ, ರಾಯಚೂರು ಇಲ್ಲಿಗೆ ಕಳಿಸಲು ಸೂಚಿಸಲಾಗಿದೆ.ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ ಢಿಢಿಢಿ.್ಞಟಜ್ಛ.್ಝಟಿ ಸಂಪರ್ಕಿಸಲು ಎಂದು ಇಲಾಖೆ ತಿಳಿಸಿದೆ.
ಆ. 29 ರಿಂದ
ವಸ್ತು ಪ್ರದರ್ಶನ
ರಾಯಚೂರು: ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಬಗ್ಗೆ ವಸ್ತು ಪ್ರದರ್ಶನ, ಬೀದಿ ನಾಟಕ, ವಿಚಾರಸಂಕಿರಣ ಕಾರ್ಯಕ್ರಮಗಳನ್ನು ಆ.29, 30ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಪಿ. ವೆಂಕಟೇಶ್ವರ ತಿಳಿಸಿದರು. ಈಚೇಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿ, ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಸ್ತೆ, ಕುಡಿವ ನೀರು, ಶಿಕ್ಷಣ, ನೀರಾವರಿ, ಆಹಾರ ಭದ್ರತೆ ಸೇರಿ ಇತರೆ ಯೋಜನೆಗಳ ಕುರಿತು ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ ನಡೆಯಲಿದೆ ಎಂದರು. ರಂಗಮಂದಿರದ ಹೊರ ಆವರಣದಲ್ಲಿ 40 ಮಳಿಗೆಯಲ್ಲಿ ವಸ್ತು ಪ್ರದರ್ಶನದ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ, ಎಎಸ್ಪಿ ಡಾ. ದಿವ್ಯಾ ಗೋಪಿನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅರ್ಜಿ ಆಹ್ವಾನ
ರಾಯಚೂರು: ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಿಗೆ ತಾಲೂಕಿನ ವಿವಿಧೆಡೆ ಬೋಧನೆಗೆ ಅರೆಕಾಲಿಕ ಬೋಧಕರಿಂದ ಅರ್ಜಿ ಕರೆಯಲಾಗಿದೆ.ರಾಯಚೂರು, ಕಲ್ಮಲಾ, ಯಾಪಲದಿನ್ನಿ, ದೇವನಪಲ್ಲಿ, ಜೇಗರಕಲ್, ಮಟಮಾರಿ, ಗುಂಜಳ್ಳಿ ವಸತಿ ನಿಲಯಗಳಲ್ಲಿ ಪ್ರಸಕ್ತ ಸಾಲಿಗೆ ಅರೆಕಾಲಿಕ ಬೋಧಕರಿಂದ ಅರ್ಜಿ ಕರೆದಿದ್ದು, ಆಸಕ್ತರು ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದು ದಾಖಲೆಯೊಂದಿಗೆ ಆ.17ರೊಳಗೆ ಸಲ್ಲಿಸಲು ಕೋರಲಾಗಿದೆ.