ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೃಷಿ ವಿಜ್ಞಾನ ಕೇಂದ್ರಕ್ಕೆ ತಜ್ಞರ ಭೇಟಿ

Vishwanath S
Updated On : 15 Aug 2013, 11:38 am

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.14
ಇಲ್ಲಿನ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಮೊರೊಕ್ಕೊ ಹಾಗೂ ಇಕ್ರಿಸ್ಯಾಟ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅನುಷ್ಠಾನಗೊಳಿಸಿದ ಮೊರೊಕ್ಕೊ- ಭಾರತ ದ್ವಿದಳ ಧಾನ್ಯಗಳ ಉತ್ತೇಜನ ಯೋಜನೆಯ ಪ್ರಗತಿಯನ್ನು ಇತ್ತೀಚೆಗೆ ಪರಿಶೀಲಿಸಲಾಯಿತು.
ಮೊರೊಕ್ಕೊ ದೇಶದ ವಿಜ್ಞಾನಿಗಳಾದ ಡಾ. ಎ.ಲ್ಯಾಮಾಣಿ ಮತ್ತು ಮೌಖಾರಿಕ್ ಹಸಿನಾ, ಕರ್ನಾಟಕ ಕೃಷಿ ಮಿಷನ್‌ನ ಅಧ್ಯಕ್ಷ ಡಾ. ಎಸ್.ಎ. ಪಾಟೀಲ್, ಇಕ್ರಿಸ್ಯಾಟ್ ಸಂಸ್ಥೆಯ ವಿಜ್ಞಾನಿ ಡಾ. ರಂಗರಾವ್, ಡಾ. ರವೀಂದ್ರ ರೆಡ್ಡಿ ಅವರಿದ್ದ ತಂಡದವರು ಮೊದಲಿಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದರು.
ಎಲ್ಲೆಲ್ಲಿ ಅನುಷ್ಠಾನ?: ನಂತರ ಕೃಷಿ ವಿಜ್ಞಾನ ಕೇಂದ್ರದ ಯೋಜನೆಯಡಿ ತೊಗರಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಎಂಬ ಪ್ರಾತ್ಯಕ್ಷಿಕೆಯನ್ನು ರಾಯಚೂರು ತಾಲೂಕಿನ ರಘುನಾಥನಹಳ್ಳಿ ಹಾಗೂ ಹರಳಪ್ಪನ ಹುಡಾ ಹಾಗೂ ಮಾನವಿ ತಾಲೂಕಿನ ಕುರ್ಡಿ ಹಾಗೂ ಕಲ್ಲೂರು ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿದ್ದು, ಕುರ್ಡಿ ಹಾಗೂ ಕಲ್ಲೂರು ಗ್ರಾಮಗಳ ಪ್ರಾತ್ಯಕ್ಷಿಕೆ ತಾಕುಗಳನ್ನು ತಂಡದ ಸದಸ್ಯರು ವೀಕ್ಷಿಸಿದರು.
ತೊಗರಿಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಕ್ರಮಗಳಾದ ಉತ್ತಮ ತಳಿಯ ಆಯ್ಕೆ ಜೈವಿಕ ಗೊಬ್ಬರ ಹಾಗೂ ಶಿಲೀಂಧ್ರನಾಶಕದಿಂದ ಬೀಜೋಪಚಾರ, ಬಿತ್ತನೆಯ ಅಂತರ, ಲಘು ಪೋಷಕಾಂಶಗಳ ಬಳಕೆ, ಸಸಿ ವಿರಳಗೊಳಿಸುವಿಕೆ ಮತ್ತಿತರೆ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯ ಕುರಿತು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ. ಮೋಹನ ಚವ್ಹಾಣ್ ವಿಜ್ಞಾನಿಗಳಿಗೆ ಮಾಹಿತಿ ನೀಡಿದರು.
ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಪ್ರಮೋದ ಕಟ್ಟಿ ಇದ್ದರು. ಕುರ್ಡಿ ಗ್ರಾಮದ ಪ್ರಗತಿ ಪರ ರೈತರಾದ ವೆಂಕಟೇಶರೆಡ್ಡಿ ಹಾಗೂ ಕಲ್ಲೂರಿನ ಪ್ರಗತಿಪರ ರೈತ ಹರಿಬಾಬು ಅವರ ಹೊಲದಲ್ಲಿ ಹಮ್ಮಿಕೊಂಡ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement