ಪತ್ರಿಕಾ ವಿತರಕರ ಸಂಘಕ್ಕೆ ರಾಜೇಶ ಜಾಲವಾಡಗಿ ಆಯ್ಕೆ
ಕನ್ನಡಪ್ರಭ ವಾರ್ತೆ , ಸಿಂಧನೂರು , ಆ.14
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾ ವಿತರಕರ ಸಭೆಯಲ್ಲಿ ತಾಲೂಕ ಪತ್ರಿಕಾ ವಿತರಕರ ಸಂಘದ ನೂತನ ಅಧ್ಯಕ್ಷರಾಗಿ 'ಕನ್ನಡಪ್ರಭ' ದಿನಪತ್ರಿಕೆಯ ಏಜೆಂಟ್ ರಾಜೇಶ ಜಾಲವಾಡಗಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಕೊಟ್ಟೂರಯ್ಯಸ್ವಾಮಿ, ಬಸವರಾಜ ಬೆನ್ನೂರು (ಗೌರವ ಸಲಹೆಗಾರರು), ಕುಮಾರ ಕಂಟಿ, ನಾಗಭೂಷಣ ಯರದಿಹಾಳ (ಉಪಾಧ್ಯಕ್ಷರು), ಲಕ್ಷ್ಮಣ (ಪ್ರಧಾನ ಕಾರ್ಯದರ್ಶಿ), ಮಲ್ಲಿಕಾರ್ಜುನ ಹಿರೇಮಠ (ಖಜಾಂಚಿ), ಸೋಮನಾಥ (ಕಾರ್ಯದರ್ಶಿ) ಹಾಗೂ ಸದಸ್ಯರಾಗಿ ರಾಘವೇಂದ್ರ, ರಾಮು, ಬಸವ, ಸುರೇಶ ರಾಠೋಡ, ನರಸಿಂಹ ದೇಶಪಾಂಡೆ, ವಿಜಯಕುಮಾರ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಡಿ.ಎಚ್. ಕಂಬಳಿ, ಅಶೋಕ ಬೆನ್ನೂರು, ಶರಣಪ್ಪ ಗೋನಾಳ, ಅಮರೇಶ ಅಲಬನೂರು, ಮಲ್ಲಿಕಾರ್ಜುನ ಚಿಲಕರಾಗಿ, ಚಂದ್ರಶೇಖರ ಬೆನ್ನೂರು, ಶೇಖರ ಯರದಿಹಾಳ, ದುರ್ಗಾಪ್ರಸಾದ, ಶಿವಪುತ್ರ ಇದ್ದರು.