29ರಂದು ಕ್ರೀಡಾ ದಿನಾಚರಣೆ
ರಾಯಚೂರು: ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಎಡು ಏಷಿಯಾ ಇಂಟರ್‌ನ್ಯಾಷನಲ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಆ.29ರಂದು ಕ್ರೀಡಾ ದಿನಾಚರಣೆ ಆಯೋಜಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅಸೋಸಿಯೇಶನ್‌ನ ಪ್ರಮುಖರು ಖ್ಯಾತ ಹಾಕಿ ಪಟು ಧ್ಯಾನಚಂದ್ ಅವರ ಸ್ಮರಣಾರ್ಥ ಆ.29ರಂದು ಈ ಕ್ರೀಡಾ ದಿನಾಚರಿಸಲಾಗುತ್ತಿದ್ದು, ಇದರಂಗವಾಗಿ ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ 8 ಕಿ.ಮೀ. ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಆ.28ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3.30ರಿಂದ 6ರವರೆಗೆ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ. ವಿವರಕ್ಕೆ ಅಸೋಸಿಯೇಶನ್‌ನ ಕೆ. ಸತ್ಯನಾರಾಯಣ- 99868 59891, ಕೆ. ತಿಮ್ಮಾರೆಡ್ಡಿ- 98444 84481, ಚಂದ್ರಶೇಖರ್ ರೆಡ್ಡಿ- 97318 08431, ರಾಜಕುಮಾರ್-94482 65124 ಸಂಪರ್ಕಿಸಬಹುದು.