ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆಧಾರ್ ಕಾರ್ಡ್ ಕೇಂದ್ರ ಆರಂಭ: ಸದುಪಯೋಗಕ್ಕೆ ಮನವಿ

Rashmi Kasaragodu
Updated On : 19 Aug 2013, 11:56 am

ಸಿಂಧನೂರು:ನಗರದ ನಟರಾಜ ಕಾಲೋನಿಯಲ್ಲಿ ಬರುವ ಗ್ಲೋರಿ ಶಾಲೆಯಲ್ಲಿ ಶನಿವಾರ ಮಲ್ಲಯ್ಯ ಗೋರ್ಕಲ್ ಸಂಚಾಲಕತ್ವದ ಆಧಾರ್ ಕಾರ್ಡ್ ವಿತರಣಾ ಕೇಂದ್ರ ಆರಂಭಗೊಂಡಿತು.
ಕಾರ್ಯಕ್ರಮವನ್ನು ಕಂಪ್ಯೂಟರ್ ಗುಂಡಿ ಒತ್ತುವ ಮೂಲಕ ಉದ್ಘಾಟಿಸಿದ ನಗರಸಭೆ ಸದಸ್ಯ ಪ್ರಭುರಾಜ ಮಾತನಾಡಿ, ಇಷ್ಟು ದಿನ ಆಧಾರ್ ಕಾರ್ಡ್ಗೆ ಜನತೆ ಹಗಲು ರಾತ್ರಿ ವಿತರಣಾ ಕೇಂದ್ರದ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರಂತೂ ಬೆಳಗಿನ 4ಗಂಟೆಗೆ ಕೇಂದ್ರಕ್ಕೆ ಹೋಗಿ ಸರದಿ ಸಾಲಿನಲ್ಲಿ ಮಲಗುತ್ತಿದ್ದರು.್ಙ ಇತ್ತೀಚೆಗೆ ಒತ್ತಡ ಕಡಿಮೆಯಾಗಿದ್ದರೂ ಎಪಿಎಂಸಿ ರೈತ ಭವನದಲ್ಲಿ ಜನ ಬೆಳಗಿನ ಜಾವ ಮುಗಿಬೀಳುತ್ತಿದ್ದರು. ಈ ಬಗ್ಗೆ ಸಹಾಯಕ ಆಯುಕ್ತ ಟಿ.ಯೋಗೇಶ ಹಾಗೂ ತಹಶೀಲ್ದಾರ ಬಿ.ಟಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಗ್ಲೋರಿ ಶಾಲೆಯಲ್ಲಿ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಆಧಾರ್ ಕಾರ್ಡ್ನ ಗಣಕಯಂತ್ರದ ಸಿಬ್ಬಂದಿ ರಗಡಪ್ಪ ದಢೇಸುಗೂರು, ನಾಗರಾಜ, ರಜಿಯಲ್ಲಾ, ಗೌಡಪ್ಪ, ನಟರಾಜ ಕಾಲೋನಿಯ ಜೈಕರ್, ಪಿ.ಬಿ. ಚವ್ಹಾಣ, ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಅಮರಾಪುರ, ಬಸವರಾಜ ಕನಸಾವಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement