ಆಧಾರ್ ಕಾರ್ಡ್ಗೆ ಹೆಚ್ಚಿನ ಹಣ ವಸೂಲು
ರಾಯಚೂರು: ನಗರದಲ್ಲಿ ಆಧಾರ್ ಕಾರ್ಡು ವಿತರಿಸಲು ಗುತ್ತಿಗೆ ಪಡೆದ ಸಂಸ್ಥೆಯು ಎರಡು ಕೇಂದ್ರಗಳಲ್ಲಿ ಜನರಿಂದ ಹೆಚ್ಚಿನ ಹಣ ವಸೂಲು ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ಪಡೆ ಆರೋಪಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಚೆಗೆ ದೂರು ಸಲ್ಲಿಸಿ, ಕ್ಯಾಲನ್ಸಿ ಸಾಫ್ಟ್ವೇರ್ ಪ್ರೈವೇಟ್ ಲಿ. ಎಂಬ ಸಂಸ್ಥೆಯು ನಗರದಲ್ಲಿ ಎರಡು ಕಡೆ ಆಧಾರ್ ಕಾರ್ಡು ನೀಡುವ ಕೇಂದ್ರಗಳನ್ನು ಆರಂಭಿಸಿದ್ದು, ಅಲ್ಲಿ ಗ್ರಾಮೀಣ ಜನರಿಂದ 100 ರು.ವರೆಗೆ ಹಣ ಪಡೆಯುತ್ತಿದೆ ಎಂದು ದೂರಿದೆ.
ಇಂಡಿಯನ್ ಬ್ಯಾಂಕಿನಿಂದ ಆಧಾರ್ ಕಾರ್ಡು ಪಡೆಯಲು ಅರ್ಜಿ ಮುದ್ರಿಸಿ ನೀಡಿದ್ದರೂ ಸಂಸ್ಥೆಯವರು ಬ್ಯಾಂಕಿಗೆ ಹಣ ಪಾವತಿಸಬೇಕೆಂದು ನೆಪಮೊಡ್ಡಿ ಜನರಿಂದ ಅನಗತ್ಯವಾಗಿ ಹಣ ಪಡೆಯುತ್ತಿದ್ದು ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಈ ಸಂದರ್ಭ ಸಂಘಟನೆಯ ಅಧ್ಯಕ್ಷ ಸೂಗರಯ್ಯಸ್ವಾಮಿ ಮತ್ತಿತರರಿದ್ದರು.