ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಾರತ ವಿಕಾಸ ಪರಿಷತ್ನಿಂದ ಮಕ್ಕಳಿಗೆ ಸಂಸ್ಕಾರ ಸಂಕಲ್ಪ

Rashmi Kasaragodu
Updated On : 19 Aug 2013, 12:01 pm

ಸುರಪುರ: ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಮಕ್ಕಳ ಬದುಕಿನ ಪರಿಪೂರ್ಣ ವಿಕಾಸಕ್ಕೆ ಬೇಕಾದ ಸಂಸ್ಕಾರ ನೀಡುವ ಮೂಲಕ, ಸಾಮಾಜಿಕ ಮತ್ತು ಅಧ್ಯಾತ್ಮಿಕವಾಗಿ ಸಂಸ್ಥೆ 50 ವರ್ಷಗಳಿಂದ ದೇಶದಲ್ಲಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೈದರಾಬಾದ ಕರ್ನಾಟಕ ಭಾಗದಲ್ಲಿ 25 ಶಾಖೆಗಳನ್ನು ಆರಂಭಿಸುವ ಸಂಕಲ್ಪ ಹೊಂದಲಾಗಿದೆ ಎಂದು ವಿಕಾಸ ಪರಿಷತ್ನ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ ಮಳಗಿ ಹೇಳಿದರು.
ರಾಜಕೀಯೇತರ ಸಂಸ್ಥೆ: ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿ ಭಾನುವಾರ ನಡೆದ ಭಾರತ ವಿಕಾಸ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೊಂದು ರಾಜಕೀಯೇತರ ಸ್ವಯಂ ಸೇವಾ ಸಂಸ್ಥೆಯಾಗಿದೆ. ರಾಷ್ಟ್ರ ಹಾಗೂ ಅಂತಾರರಾಷ್ಟ್ರೀಯ ಮಟ್ಟದಲ್ಲಿ 12 ನೂರಕ್ಕೂ ಹೆಚ್ಚು ಶಾಖೆಗಳನ್ನು ಆರಂಭಿಸಲಾಗಿದೆ. ರಾಜ್ಯದಲ್ಲಿ 37 ಹಾಗೂ ಉತ್ತರ ಕರ್ನಾಟಕದಲ್ಲಿ 13 ಶಾಖೆಗಳು ಇವೆ. ಈ ಭಾಗದಲ್ಲಿ 25 ಶಾಖೆಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದೊಂದು ಉತ್ತಮ ಸಾಮಾಜಿಕ ಸೇವಾ ಸಂಸ್ಥೆಯಾಗಿರುವುದರಿಂದ ತಮಗೆ ಸೇವೆ ಮಾಡುವ ಅವಕಾಶ ಸಿಗುತ್ತದೆ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಂಸ್ಕಾರ ದರ್ಪಣ: ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಅಂಗವಾಗಿ ಪರಿಷತ್ ಗುರು ದಿನವನ್ನಾಗಿ ಆಚರಿಸುತ್ತದೆ. ಸರ್ಕಾರದ ಪ್ರಶಸ್ತಿ ಪುರಸ್ಕೃತರನ್ನು ಹೊರತು ಪಡಿಸಿ ಶಾಲಾ ಮಕ್ಕಳಿಂದ ಮತ್ತು ಸಮಾಜದಿಂದ ಉತ್ತಮ ಹಾಗೂ ಜನಾನುರಾಗಿ ಶಿಕ್ಷಕರೆಂಬ ಅಭಿಪ್ರಾಯ ಸಂಗ್ರಹಿಸಿ ಶಿಕ್ಷಕರನ್ನು ಗೌರವಿಸಲಾಗುತ್ತಿದೆ. ಸಂಸ್ಕಾರ ದರ್ಪಣ ಎನ್ನುವ ಕಾರ್ಯಕ್ರಮದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಆದರ್ಶ ಬದುಕು ರೂಪಿಸಿಕೊಳ್ಳಲು ಪ್ರಾಯೋಗಿಕ ತರಬೇತಿ ಶಿಬಿರಗಳನ್ನು ಆಯೋಜಿಸುತ್ತದೆ. ದೇಶದ ವಿಕಾಲಂಗರಿಗೆ ಸರ್ಕಾರ ಶೇ. 40ರಷ್ಟು ನೆರವು ನೀಡಿದರೆ, ನಮ್ಮ ಸಂಸ್ಥೆ ಶೇ.60ರಷ್ಟು ನೆರವು ನೀಡಿ ವಿಕಲಾಂಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಸ್ಥೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪ್ರಲ್ಹಾದರಾವ ಕುಳಿಗೇರಿ ಸ್ವಾಗತಿಸಿದರು. ಭೀಮಸೇನರಾವು ರೌಡಕುಂದಿ ನಿರೂಪಿಸಿದರು. ವೆಂಕೋಬರಾವು ಬೀರನೂರ ವಂದಿಸಿದರು. ಚನ್ನಮಲ್ಲಪ್ಪ ಪಾಟೀಲ, ಬಿಸಿಎನ್ ದೇಶಮುಖ್, ಶುವುಕುಮಾರ ಮಸ್ಕಿ, ಬಸವರಾಜ, ಶ್ರೀನಿವಾಸ ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement