ಮೃತ ಹಸುಗೂಸು ಹಂದಿಗಳ ಪಾಲು
ಶಹಾಪುರ: ಯಾರ ಪಾಪದ ಫಲವೋ ಏನೋ? ಆಗತಾನೇ ಜನಿಸಿದ ಹಸುಗೂಸೊಂದನ್ನು ಚರಂಡಿ ಪಕ್ಕದಲ್ಲಿ ಎಸೆದು ಹೋಗಿದ್ದು, ಅದನ್ನು ಹಂದಿಗಳು ಎಳೆದಾಡಿ ತಿಂದಿರುವ ಘಟನೆ ಪಟ್ಟಣದ ಹಳೇ ಬಸ್ ನಿಲ್ದಾಣದ ಹಿಂದೆ ನಡೆದಿದೆ. ಎಸೆದ ಹಸುಗೂಸು ಸಾರ್ಜಜನಿಕರ ಕಣ್ಣಿಗೆ ಬೀಳುವಷ್ಟರಲ್ಲಿಯೇ ಮೃತಪಟ್ಟಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಶಿಶುವನ್ನು ಎಸೆದ ತಾಯಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹುಟ್ಟುವಾಗಲೇ ಶಿಶು ಮೃತಪಟ್ಟಿದ್ದರೆ ಅದನ್ನು ಸಂಸ್ಕಾರವಾದರೂ ಮಾಡಬಹುದಿತ್ತು. ಆದರೆ ಅದನ್ನು ಚರಂಡಿ ಪಕ್ಕದಲ್ಲಿ ಎಸೆದಿದ್ದು ಕರಳು ಚುರ್ ಎನ್ನಿಸಿತು. ಇದು ಅನೈತಿಕ ಸಂಬಂಧದಿಂದ ಜನಿಸಿತ್ತು ಅಥವಾ ಹುಟ್ಟುವಾಗಲೇ ಮಗು ಮೃತಪಟ್ಟಿರುವ ಕಾರಣ ಈ ರೀತಿ ಎಸೆದು ಹೋಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಉಚಿನ ಆರೋಗ್ಯ ತಪಾಸಣಾ ಶಿಬಿರ
ಶಹಾಪುರ: ಹೃದಯ ರೋಗ, ನರರೋಗ ಮತ್ತು ಮೂತ್ರಪಿಂಡ ಇನ್ನಿತರ ರೋಗದ ಸಮಸ್ಯೆ ಇರುವವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಶಹಾಪುರ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ತಪಾಸಣೆ ನಡೆಸಲಾಯಿತು. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಸ್ಥಳೀಯ ವೀರಶೈವ ಮಹಾಸಭಾದ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 35 ಜನ ಹೃದಯ ರೋಗ, 11 ಜನ ನರರೋಗ ಮತ್ತು 5 ಜನ ಕಿಡ್ನಿ ತೊಂದರೆ ಉಳ್ಳವರಿಗೆ ಚಿಕಿತ್ಸೆಯ ವ್ಯವಸ್ಥೆಗೆ ಅನುಕೂಲ ಕಲ್ಪಿಸಿದೆ. ಈ ಕುರಿತು ಮಾತಣಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಜಗದೀಶ ಉಪ್ಪಿನ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯು ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯ ಕಲ್ಪಿಸಿದ್ದು ಬೆಂಗಳೂರಿಗೆ ಹೋಗುವ ಮತ್ತು ಊಟ ವಸತಿಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಕ್ಲಬ್ನ ಸರ್ವರ ಸಹಕಾರದಿಂದ ಇದೊಂದು ಉತ್ತಮ ಶಿಬಿರ ನಡೆದಿದೆ ಎಂದರು. ವೈದ್ಯರಾದ ಡಾ.ಚಂದ್ರಶೇಖರ, ಡಾ. ವಿನೋದ ಬಿರಾದಾರ, ಡಾ.ವಿನಯ ತಪಸಾಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡಾ. ಎಸ್.ಆರ್. ಶಿಣ್ಣೂರ, ಬಸವರಾಜ ತುಂಬಗಿ , ಮಲ್ಲಿಕಾರ್ಜುನ ಕಾಡಂಗೇರಾ, ಮಲ್ಲಿಕಾರ್ಜುನ ಚಿಕ್ಕಮೇಟಿ, ಗುರುಮೂರ್ತಿ ನಾಯನಗೇಲಿ, ಅವಿನಾಶ ಶಿಣ್ನೂರ, ಪ್ರಕಾಶಬಾಬು, ಮಾಂಗಿಲಾಲ ಜೈನ್, ಅಯ್ಯಣ್ಣ ಇನಾಮದಾರ, ಜಗದೀಶ, ಸುಧೀರ ಚಿಂಚೊಳಿ, ಮನೋಜಕುಮಾರ ಜೈನ, ಗುರುಕಾಮ ಇತರರು ಇದ್ದರು.
ಪಾಠದ ಜತೆಗೆ ಆಟವೂ ಮುಖ್ಯ
ಕೆಂಭಾವಿ: ಪಾಠದ ಜತೆಗೆ ಆಟವೂ ಮಕ್ಕಳಿಗೆ ಅಷ್ಟೇ ಮುಖ್ಯ. ಪಾಠವು ಬುದ್ಧಿಶಕ್ತಿಯನ್ನು ಹೆಚ್ಚಿಸಿದರೆ ಆಟಗಳು ಪ್ರತಿಯೊಂದು ಮಗುವಿನ ದೈಹಿಕ ಬೆಳವಣಿಗೆಗೆ ಸಹಕರಿಯಾಗುತ್ತವೆ ಎಂದು ಮುಖ್ಯಗುರು ಬಸವರಾಜ ಮಲ್ಲೆ ಹೇಳಿದರು. ಸಮೀಪದ ಮಾಲಗತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಟದಲ್ಲಿ ಸೋಲು- ಗೆಲವು ಸಾಮಾನ್ಯ. ವಿವಿಧ ಶಾಲೆಗಳಿಂದ ಬಂದಿರುವ ಎಲ್ಲ ಮಕ್ಕಳು ಸಹೋದರತ್ವದ ಭಾವನೆಯಿಂದ ಆಟ ಆಡಬೇಕು ಎಂದು ಹೇಳಿದರು. ಕ್ರೀಡಾ ಧ್ವಜವನ್ನು ಎಸ್ಡಿಎಂಸಿ ಅಧ್ಯಕ್ಷ ಸಣ್ಣಕೆಪ್ಪ ಸಾಹುಕಾರ ಆರೋಹಣಗೈದರು. ಕ್ರೀಡಾ ಜ್ಯೋತಿಯನ್ನು ವಿಎಸ್ಎಸ್ ಅಧ್ಯಕ್ಷ ಶ್ರೀನಿವಾಸ ದೊರಿ ಸ್ವೀಕರಿಸಿದರು. ನಂತರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಲಾಡ್ಲೆಪಟೇಲ, ಭೀಮಣ್ಣ ದೊರಿ, ಮಹಿಬೂಬ ಪಟೇಲ, ದೇವಪ್ಪ ದೊರಿ, ಗ್ರಾಪಂ ಕಾರ್ಯದರ್ಶಿ ಜಯಾಚಾರ್ಯ ಪುರೋಹಿತ, ವಿರುಪಾಕ್ಷಪ್ಪಗೌಡ, ಜಟ್ಟೆಪ್ಪಗೌಡ, ಭೀಮರಾಯ ಕೆಂಭಾವಿ ಇತರರು ಇದ್ದರು.