ಯೋಜನೆ ಸದುಪಯೋಗಕ್ಕೆ ದಾನಪ್ಪ ಆಲ್ಕೋಡ್ ಸಲಹೆ
್ಙದೇವದುರ್ಗ: ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ಫಲಾನುಭವಿಗಳದ್ದಾಗಿದೆ ಎಂದು ಅರಕೇರಾ ಜಿ.ಪಂ. ಸದಸ್ಯ ದಾನಪ್ಪ ವೈ. ಆಲ್ಕೋಡ್ ಹೇಳಿದರು.
ಅವರು ಈಚೆಗೆ ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿ ಜಿಪಂ ಕೈಗಾರಿಕಾ ಇಲಾಖೆಯಿಂದ ಕುಶಲ ಕರ್ಮಿಗಳಿಗೆ ಹೊಲಿಗೆ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿ, ಸರ್ಕಾರದ ಹಲವಾರು ಯೋಜನೆಗಳು ಬಡವರಿಗಾಗಿ, ನಿರುದ್ಯೋಗಿಗಳಿಗಾಗಿ ರೂಪಿಸಿದ್ದು, ಅವುಗಳ ಉಪಯೋಗ ಪಡೆಯುವಂತೆ ಮನವಿ ಮಾಡಿದರು.
ಮುದುಕಪ್ಪ ನಾಯಕ, ಖೇಮಣ್ಣ ಬಂಡೆಗುಡ್ಡ, ಚಾಂದಪಾಷಾ ಅರಕೇರಾ, ಬಗಯ್ಯ ಕುರ್ಲೇರದೊಡ್ಡಿ, ಶಿವರಾಜ್ ಶಾವಂತಗಲ್, ಹೊಣೆಕೇರಪ್ಪ ಆಲ್ಕೋಡ್, ಭೀಮಶಪ್ಪ ಕೊತ್ತದೊಡ್ಡಿ, ಶೇಖರಪ್ಪ ಉಲಕಬಂಡ ಉಪಸ್ಥಿತರಿದ್ದರು.