ಕುಂಬಾರ ಸಮಾಜ ಪದಾಧಿಕಾರಿಗಳ ಆಯ್ಕೆ
ಜೇವರ್ಗಿ: ಜೇವರ್ಗಿ ತಾಲೂಕಿನ ಯಡ್ರಾಮಿ ವಿರಕ್ತ ಮಠದಲ್ಲಿ ಮಠದ ಪೀಠಾಧಿಪತಿ ಸಿದ್ಧಾರಾಮ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ತಾಲೂಕು ಕುಂಬಾರ ಸಮಾಜದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಶೈಲ್ ಕುಂಬಾರ ಮಯೂರ, ಉಪಾಧ್ಯಕ್ಷರಾಗಿ ಯಂಕಪ್ಪ ಕುಂಬಾರ ಯಾಳವಾರ, ಗುಂಡಪ್ಪ ಕುಂಬಾರ ಜವಳಗಾ, ಪ್ರಧಾನ ಕಾರ್ಯದರ್ಶಿಯಾಗಿ ಮೊನಪ್ಪ ಕುಂಬಾರ ಹಂಚಿನಾಳ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ರಾಮಪ್ಪ ಹರನೂರ, ಮಲ್ಲಿಕಾರ್ಜುನ ಪುರದಾಳ, ಖಜಾಂಚಿಯಾಗಿ ನಿಂಗಣ್ಣ ಎಸ್. ಕುಂಬಾರ ಕಲ್ಲಹಂಗರಗಾ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಅಂಬಿಕಾ ಕುಂಬಾರ ಗಂವ್ಹಾರ, ಅನಸುಬಾಯಿ ಕುಂಬಾರ, ಗೌರಾಬಾಯಿ ಕುಂಬಾರ ಮಯೂರ (ಮಹಿಳಾ ಪ್ರತಿನಿಧಿ), ಸಕ್ರೇಪ್ಪ ಕುಂಬಾರ ಹಾಲಗಡ್ಲಾ, ಗುಂಡಪ್ಪ ಹಿಪ್ಪರಗಾ,ಮುರಗಪ್ಪ ಕುಂಬಾರ ಯಡ್ರಾಮಿ, ದೇವಿಂದ್ರಪ್ಪ ಅರಳಗುಂಡಗಿ, ಸೋಮಣ್ಣ ಕಾಚಾಪುರ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.