ದುಶ್ಚಟ ಬಿಟ್ಟು ಸುಂದರ ಸಮಾಜ ಕಟ್ಟಿ: ಡಾ.ಶರಣಪ್ಪ
ಗುಲ್ಬರ್ಗ: ಯುವ ಜನಾಂಗ ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಮತ್ತು ಸುಂದರ ಸಮಾಜ ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಸರ್ಕಾರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಸಹ ಪ್ರಾಧ್ಯಾಪಕ ಡಾ. ಶರಣಪ್ಪ ಎಸ್. ಮಾಳಗಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಕೇಂದ್ರ ಕಾರಾಗೃಹ ಬಿಜಾಪುರ ಆಶ್ರಯದಲ್ಲಿ ನಡೆದ ಮದ್ಯಪಾನ ಮತ್ತು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ಪ್ರಧಾನ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಧೀಶ ಕೆ.ನಿಂಗೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಆರ್. ಅನಿತಾ, ಬಿ.ಎಲ್. ಜಿನರಾಳಕರ್, ಎ.ಬಿ. ಪಾಟೀಲ್, ಆರ್.ಚೇತನ, ಡಾ. ಆನಂದ ಕುಲಕರ್ಣಿ, ಬಂಡೆಪ್ಪ ತೇಲಿ ಇತರರು ಉಪಸ್ಥಿತರಿದ್ದರು.