ಮಾನವ ಹಕ್ಕುಗಳ ಆಯೋಗದ ಸದಸ್ಯರ ಪ್ರವಾಸ
ಗುಲ್ಬರ್ಗ: ರಾಜ್ಯದ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಆ.27ರಂದು ಬೆಳಗ್ಗೆ ಉದ್ಯಾನ ಎಕ್ಸ್ಪ್ರೆಸ್ ರೈಲು ಮೂಲಕ ಗುಲ್ಬರ್ಗಕ್ಕೆ ಆಗಮಿಸುವರು. ಅಂದು ಮಧ್ಯಾಹ್ನ 11.30 ಗಂಟೆಯಿಂದ 1 ಗಂಟೆಯವರೆಗೆ ಗುಲ್ಬರ್ಗ ಜಿಲ್ಲೆಯ ದೂರುಗಳನ್ನು ಸ್ವೀಕರಿಸುವರು. ಮಧ್ಯಾಹ್ನ 3 ರಿಂದ 4.30 ಗಂಟೆವರೆಗೆ ಗುಲ್ಬರ್ಗ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವರು ಹಾಗೂ ವಾಸ್ತವ್ಯ ಮಾಡುವರು. ಆ.28ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚಿಸುವರು. ಮಧ್ಯಾಹ್ನ 3 ಗಂಟೆಯಿಂದ 4.30 ಗಂಟೆಯವರೆಗೆ ಜಿಲ್ಲಾ ಬಂದೀಖಾನೆಗೆ ಭೇಟಿ ನೀಡುವರು. ಆ.29ರಂದು ಬೆಳಗ್ಗೆ 10.30 ಗಂಟೆಗೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡುವರು.