ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿವಿಧೆಡೆ ಸ್ವಾತಂತ್ರೋತ್ಸವ ಆಚರಣೆ

Rashmi Kasaragodu
Updated On : 20 Aug 2013, 11:49 am

ರಾಯಚೂರು:  ನಗರದ ಗಾಂಧಿ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರೋತ್ಸವವನ್ನು ಇತ್ತೀಚೆಗೆ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ವಾಸುದೇವ ದೇವನಪಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಹೋರಾಟಗಾರರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಚ್. ಸಾಗರ್, ಕಾರ್ಯದರ್ಶಿ ಸೀತಾರಾಂ, ಖಜಾಂಚಿ ಅಮರೇಶ ರಾಯಕೋಟಿ, ಉಪನ್ಯಾಸಕರಾದ ಸುರೇಶ್ ಸಾಲಿಮಠ, ತಾಯಪ್ಪ ಮನ್ಸಲಾಪುರ, ಮಹಮ್ಮದ್, ವಿಜಯ ಕುಮಾರ್ ಸೇರಿ ಅನೇಕರಿದ್ದರು.
ಎಸ್ಎಸ್ ಎಂ ಕಾಲೇಜು:  ನಗರದ ಎಸ್ ಎಸ್.ಎಂ. ಮಹಾವಿದ್ಯಾಲಯದಲ್ಲಿ ಸ್ವಾತಂತ್ರೋತ್ಸವ ಸಂಭಮದಿಂದ ಆಚರಿಸಲಾಯಿತು. ಟಾಗೋರ್ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆರ್.ಕೆ.ಅಮರೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾಚನೂರು, ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕಕುಮಾರ್ ಭೋಜರಾಜ, ಕೆ.ವಿರೂಪಾಕ್ಷಗೌಡ, ಎಂ.ಚನ್ನಯ್ಯ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement