ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

23ರಿಂದ 'ಶ್ರಾವಣಕ್ಕಾಗಿ ಮಾಸದ ಶರಣರು' ಕಾರ್ಯಕ್ರಮ

Rashmi Kasaragodu
Updated On : 21 Aug 2013, 12:27 pm

ಕ.ಪ್ರ.ವಾರ್ತೆ   ಗುಲ್ಬರ್ಗ   ಆ.20
ಬಸವತತ್ವ ಮೈಗೂಡಿಸಿಕೊಂಡು ತತ್ವ ಪ್ರಚಾರಕ್ಕಾಗಿ ತಮ್ಮ ಬದುಕೇ ಅರ್ಪಿಸಿದ ಹಿರಿಯ ಶರಣ ಜೀವಿಗಳಾಗಿದ್ದ ಲಿಂ. ಲಿಂಗಣ್ಣ ಸತ್ಯಂಪೇಟೆ ಸ್ಮರಣಾರ್ಥ ಆ.23ರಿಂದ ಸೆ.2 ರವರೆಗೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 'ಶ್ರಾವಣಕ್ಕಾಗಿ ಮಾಸದ ಶರಣರು' ಎಂಬ ವಿನೂತನ ಕಾರ್ಯಕ್ರಮವನ್ನು ವಿಶ್ವಜ್ಯೋತಿ ಪ್ರತಿಷ್ಠಾನವು ಹಮ್ಮಿಕೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಆ.23ರಂದು ಬೆಳಗ್ಗೆ 11.30ಕ್ಕೆ ನಗರದ ಎನ್.ವಿ. ಪದವಿಪೂರ್ವ ಕಾಲೇಜಿನಲ್ಲಿ ಶರಣರ ಜೀವನ ಮೌಲ್ಯಗಳು ಕುರಿತು ಹಮ್ಮಿಕೊಂಡ ಕಾರ್ಯಕ್ರಮವನ್ನು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉದ್ಘಾಟಿಸಲಿದ್ದಾರೆ. ಪ್ರಾಚಾರ್ಯ ಪ್ರೊ. ಬಿ.ಜಿ. ಜೋಶಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಸವ ಕಲ್ಯಾಣದ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ದಶವಂತ ಬಂಡೆ ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಉದ್ಯಮಿ ಬಿ.ಜಿ. ಪಾಟೀಲ್, ಚಂದ್ರಶೇಖರ ನಿಂಗಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಆ.26ರಂದು ನಗರದ ವಿದ್ಯಾವಿಶ್ರುತ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಅನುಭವ ಮಂಟಪ ಮತ್ತು ಇಂದಿನ ಸಂಪತ್ತು ಕುರಿತು ಉಪನ್ಯಾಸ, ಆ.30ರಂದು ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶರಣರ ಕಾಯಕ, ದಾಸೋಹದ ಪರಿಕಲ್ಪನೆ ಕುರಿತು ಉಪನ್ಯಾಸ, ಆ.31ರಂದು ನಗರದ ವಿಶ್ವಗುರು ಬಸವಣ್ಣ ಪದವಿ ಕಾಲೇಜಿನಲ್ಲಿ “ËÚÁÚyÁÚß ಮತ್ತು ಮಹಿಳಾ ÑÚMÈæÞ¥Ú«æ’ ಕುರಿತು ಉಪನ್ಯಾಸ, ಸೆ.2ರಂದು ನಗರದ ಎಸ್.ಎಸ್.ತೆಗನೂರ ಪದವಿ ಮಹಾವಿದ್ಯಾಲಯದಲ್ಲಿ ಶರಣರ ವೈಚಾರಿಕ ಚಿಂತನೆ ಕುರಿತು ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ಶ್ರೀಕಾಂತಗೌಡ ತಿಳಗೂಳ, ರಾಜಶೇಖರ ಯಾಳಗಿ, ಶಿವಕುಮಾರ್ ಸಿ. ಎಚ್. ಉಪಸ್ಥಿತರಿದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement