ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಧಿಕೃತ ವೈದ್ಯರಿಗೆ ಮಾತ್ರ ಆರೋಗ್ಯ ತಪಾಸಣೆ ಮಾಡುವ ಹಕ್ಕು: ಸೈಯದ್

Rashmi Kasaragodu
Updated On : 21 Aug 2013, 12:23 pm

ಸಿಂಧನೂರು: ಖಾಸಗಿ ಪ್ರಯೋಗಾಲಯ ಹೊಂದಿರುವ ತಂತ್ರಜ್ಞರು, ನರ್ಸಿಂಗ್ ಹೋಂ, ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಪ್ರಯೋಗಾಲಯದಲ್ಲಿ ಅಧಿಕೃತ ವೈದ್ಯಕೀಯ ಪದವಿ ಹೊಂದಿದವರು ನಿರ್ದೇಶಿಸಿದ ರೋಗಿಗಳ ರಕ್ತ, ಇವರ ಪರೀಕ್ಷೆಗಳನ್ನು ಮಾತ್ರ ಮಾಡಬೇಕು ಎಂದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಾಲೂಕು ಪರಿಶೀಲನಾ ಸಮಿತಿ ಅಧಿಕಾರಿ ಡಾ.ಸೈಯದ್ ಹಸನ್ ಹುಸೇನ್  ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಖಾಸಗಿ ಪ್ರಯೋಗಾಲಯ ಹೊಂದಿರುವ ತಂತ್ರಜ್ಞರ ವಿಶೇಷ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಖಾಸಗಿ ವೈದೇಕಿಯ ಸಂಸ್ಥೆಗಳ ಅಧಿನಿಯಮದ 2007ರ ಅಡಿಯಲ್ಲಿ ಎಂಬಿಬಿಎಸ್, ಪೆಥಾಲಾಜಿಸ್ಟ್, ಪದವಿ ಪೂರೈಸಿದ ವೈದ್ಯರು ಪ್ರಯೋಗಾಲಯದ ವರದಿಗಳಿಗೆ ಅನುಮೋದನೆಯ ಸಹಿ ಹಾಕುವ ಅಧಿಕಾರವಿರುತ್ತದೆ. ಡಿಎಂಎಲ್ಟಿ ಅಥವಾ ಇತರೇ ಯಾವುದೇ ಶಿಕ್ಷಣ ಹೊಂದಿದ್ದರೂ, ಸ್ವತಃ ಅವರೆ ಸಹಿ ಮಾಡಿ ಅನುಮೋದಿಸುವ ಅಧಿಕಾರವಿರುವುದಿಲ್ಲ. ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವವರು ಸಂಬಂಧಿಸಿದ ವೈದ್ಯರ ನೇಮಕಾತಿ ಪತ್ರ ಹಾಗೂ ತಮ್ಮ ವಿದ್ಯಾರ್ಹತೆ ಪ್ರಮಾಣಪತ್ರಗಳನ್ನು ಹಾಗೂ ಪ್ರತ್ಯೇಕ ಪ್ರಯೋಗಾಲಯಗಳನ್ನು ಹೊಂದಿದವರು ಹಾಗೂ ತಮ್ಮ ವಿದ್ಯಾರ್ಹತೆಯ ಪ್ರಮಾಣಪತ್ರಗಳನ್ನು ಹಾಗೂ ಎಂಬಿಬಿಎಸ್, ಪೆಥಾಲಾಜಿಸ್ಟ್ ವೈದ್ಯರ ದೃಢೀಕರಣ ಪತ್ರವನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದರು.
ವರದಿ ಸಲ್ಲಿಕೆ: ಅಧಿಕೃತ ವೈದ್ಯಕೀಯ ಶಿಕ್ಷಣ ಇಲ್ಲದ ನಕಲಿ ವೈದ್ಯರು ನೀಡುವ ರಕ್ತ ಮಾದರಿಗಳಿಗೆ ಪರೀಕ್ಷೆ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ವೇಳೆ ಅಧಿಕೃತ ವೈದ್ಯಕೀಯ ಶಿಕ್ಷಣ ಇಲ್ಲದ ನಕಲಿ ವೈದ್ಯರು ನೀಡುವ ರಕ್ತ ಮಾದರಿಗಳಿಗೆ ಪರೀಕ್ಷೆ ಮಾಡಿಕೊಟ್ಟಲ್ಲಿ ಕೆಪಿಎಂ ಈ ಕಾಯ್ದೆ-2007ರ ಅಡಿಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕ್ರಮ ಕೈಗೊಳ್ಳಲಾಗುವುದು. ತಮ್ಮ ಪ್ರಯೋಗಾಲಯದಲ್ಲಿ ನಡೆಯುವ ಪರೀಕ್ಷೆಗಳ ದೈನಂದಿನ ವರದಿಗಳನ್ನು ತಪ್ಪದೆ ಕ್ರೋಢಿಕರಿಸಿ ಮಾಸಿಕವಾಗಿ ಪ್ರತಿ ತಿಂಗಳು ಸಲ್ಲಿಸಬೇಕು. ನಗರದ ಎಲ್ಲ ಪ್ರಯೋಗಾಲಯಗಳಿಗೂ ನಿರಂತರವಾಗಿ ಭೇಟಿ ನೀಡಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಅಧಿನಿಯಮದ ಸದಸ್ಯರಾದ ಡಾ. ಕರವೀರಪ್ರಭು ಕ್ಯಾಲ್ಕೊಂಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ್. ಎಚ್. ದಾಸಪ್ಪನವರ, ಬಿಪಿಎಂ ದೀಪಕ್ ಗಾಡವಿ, ಪ್ರಯೋಗಾಲಯ ತಂತ್ರಜ್ಞರಾದ ಮಹಾಂತಗೌಡ, ವಿ.ಎಸ್. ಪಾಟೀಲ್, ವಿನಾಯಕ, ಗವಿಸಿದ್ದಪ್ಪ, ಪಾಂಡುರಂಗಪ್ಪ, ಶೋಭಾ, ಗಾಯತ್ರಿ, ವೀರೇಶ.ಕೆ., ಸುಧಾಕರ, ರವಿಕುಮಾರ, ಕೆ.ವೆಂಕಟೇಶ, ಕಳಕಪ್ಪ ಹಾದಿ, ಶಶಿಧರ, ಮುಸ್ತಾಕ್ ಅಹ್ಮದ್, ಸೈಯದ್, ಬರ್ಖತ್ ಖಾನ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement