ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿರುದ್ಯೋಗಿಗಳ ಸಮೀಕ್ಷೆ ಇಂದಿನಿಂದ

Rashmi Kasaragodu
Updated On : 21 Aug 2013, 12:19 pm

ರಾಯಚೂರು: ಜಿಲ್ಲೆಯಲ್ಲಿನ ನಿರುದ್ಯೋಗಿಗಳ ಸಮೀಕ್ಷೆ ಹಾಗೂ ಉಚಿತ ಉದ್ಯೋಗ ತರಬೇತಿ ನೀಡಿಕೆ ಹಿನ್ನೆಲೆಯಲ್ಲಿ ಆ.21 ರಿಂದ ಜಿಲ್ಲೆಯಲ್ಲಿ ಸವಿನಯ ಸೇವಾ ಸಂಸ್ಥೆಯಿಂದ ನಿರುದ್ಯೋಗಿಗಳ ಸಮೀಕ್ಷೆ ಕಾರ್ಯ ಆರಂಭಗೊಳ್ಳಲಿದೆ.
ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ವಿನಯ್ ಗಡ್ಡಿಮಠ ಪ್ರಕಟಣೆ ನೀಡಿದ್ದು, ಸವಿನಯ ಸಂಸ್ಥೆಯು ನಿರುದ್ಯೋಗಿಗಳಿಗೆ ಅವರ ಆಸಕ್ತಿಯ ಕ್ಷೇತ್ರದಲ್ಲಿ ತರಬೇತಿ ನೀಡಿ ಅವರಿಗೆ ಉದ್ಯೋಗವಕಾಶ ದೊರಕಿಸಿ ಕೊಡುವ ಕಾರ್ಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ನಿರುದ್ಯೋಗಿ ಯುವಕರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದ್ದು, ನಿರುದ್ಯೋಗಿಗಳ ಬಗ್ಗೆ ಮಾಹಿತಿ ಸಂಗ್ರಹಣೆಗೆ ಆ.21 ರಿಂದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿರುದ್ಯೋಗಿ ಯುವಕರು ತಮ್ಮ ಸ್ವವಿವರಗಳನ್ನು ಸ್ವಯಂ ಪ್ರೇರಿತರಾಗಿ ತಮ್ಮ ಹೆಸರು, ವಿದ್ಯಾರ್ಹತೆ, ವಯಸ್ಸು ಮತ್ತಿತರೆ ವಿವರಗಳನ್ನು ಸವಿನಯ ಸೇವಾ ಸಂಸ್ಥೆಗೆ ನೇರವಾಗಿ ತಲುಪಿಸಬಹುದಾಗಿದೆ. ಸಮೀಕ್ಷೆ ನಂತರ ನಿಗದಿತ ದಿನಾಂಕಗಳಂದು ತರಬೇತಿ ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಹಿತಿಗೆ ವಿನಯ್ ಗಡ್ಡಿಮಠ-7899980256 ಅಥವಾ ರಮೇಶ್ ರೆಡ್ಡಿ- 9844077387 ಇವರನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement