ಫಲಿಮಾರು ಶ್ರೀಗಳಿಂದ ಧಾನ್ಯಪೂಜೆ
ರಾಯಚೂರು: ಇಲ್ಲಿನ ಜವಾಹರ ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಯರ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಮಂಗಳವಾರ ಸಂಜೆ ಆರಾಧನೆಯ ಅಂಗವಾಗಿ ಧಾನ್ಯ ಪೂಜೆ, ಲಕ್ಷ್ಮಿಪೂಜೆ ನೆರವೇರಿಸಲಾಯಿತು.
ಉಡುಪಿಯ ಫಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಶ್ರೀಮಠದಲ್ಲಿ ಧಾನ್ಯಪೂಜೆ, ಲಕ್ಷ್ಮಿ ಪೂಜೆ ಗೋವು ಪೂಜೆಗಳ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಭಕ್ತರನ್ನು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕರು, ಅರ್ಚಕರು ಸೇರಿ ಅನೇಕ ಭಕ್ತರು ಪಾಲ್ಗೊಂಡಿದ್ದರು.