ರಜತ ವರ್ಷ ಪೂರೈಸಿದ ದಂಪತಿಗೆ ಸನ್ಮಾನ
ಸಿಂಧನೂರು: ನಗರದ ಕೋಟೆ ಬಡಾವಣೆಯಲ್ಲಿ ಒಳಬಳ್ಳಾರಿ ಚನ್ನಬಸವ ತಾತನವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ 25 ವರ್ಷ ರಜತ ಮಹೋತ್ಸವ ಪೂರೈಸಿದ ದಂಪತಿಗಳಾದ ಅಮರಗುಂಡಪ್ಪ ಗಸ್ತಿ, ಸಂಗಮ್ಮ ಅಮರಗುಂಡಪ್ಪ ಗಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಶರಣೆಗೌಡ ಬೆನ್ನೂರು ಮಾತನಾಡಿದರು. ಸುಮಾರು ವರ್ಷಗಳಿಂದ ಕೋಟೆ ಓಣಿಯಲ್ಲಿ ಯಾವುದೇ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದರೆ ಅಮರಗುಂಡಪ್ಪ ಗಸ್ತಿ ಇವರು ತಮ್ಮ ಸ್ವಇಚ್ಛೆಯಿಂದ ಅಡುಗೆ ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇವರಿಗೆ ವಿವಾಹವಾಗಿ 25 ವರ್ಷವಾಗಿದ್ದರಿಂದ ಸನ್ಮಾನಿಸಲಾಗಿದೆ ಎಂದರು. ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ ಮತ್ತು ಕೋಟೆ ಗೆಳೆಯರ ಬಳಗದ ಸದಸ್ಯರು ಪಾಲ್ಗೊಂಡಿದ್ದರು.