ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಚನಗಳು ಬದುಕಿಗೆ ದಾರಿ ದೀಪ'

Rashmi Kasaragodu
Updated On : 21 Aug 2013, 12:26 pm

ಕ.ಪ್ರ.ವಾರ್ತೆ   ಚಿತ್ತಾಪುರ   ಆ.20
ಶರಣರ ವಚನಗಳು ನಮ್ಮ ದೈನಂದಿನ ಜೀವನಕ್ಕೆ ದಾರಿ ದೀಪವಾಗಿವೆ. ಅವುಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾವೂರ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ಹೇಳಿದರು.
ತಾಲೂಕಿನ ಕಮರವಾಡಿಯಲ್ಲಿ ರಾವೂರ ವಲಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡ ಶ್ರಾವಣ ಸಾಹಿತ್ಯ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶರಣರ ಕಾಯಕದೊಂದಿಗೆ ಅಂದಿನ ಸಮಾಜದಲ್ಲಿ ಅರಾಜಕತೆ, ಮೂಢನಂಬಿಕೆ, ಲಿಂಗಬೇಧ, ತಾರತಮ್ಯ ನಿವಾರಿಸಲು ಸಮಾಜದ ಬದಲಾವಣೆಗೆ ವಚನಗಳು ಬರೆದು ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು ಎಂದರು.
ಕಾರ್ಯಕ್ರಮವನ್ನು ಗ್ರಾಮದ ಮುಖಂಡ ಶಂಕರಪ್ಪಗೌಡ ಪೊಲೀಸ್ ಪಾಟೀಲ್ ಉದ್ಘಾಟಿಸಿದರು. ರಾವೂರ ಗ್ರಾಪಂ ಸದಸ್ಯ ಶರಣು ಜ್ಯೋತಿ, ಕಸಾಪ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಮಾತನಾಡಿ, ಕಸಾಪದಿಂದ ಶರಣ ಸಾಹಿತ್ಯ ಪ್ರಚಾರ ಮಾಡಲು ಶ್ರಾವಣ ಮಾಸದಲ್ಲಿ ಸಾಹಿತ್ಯ ಸಂಜೆ ಎಂಬ ವಿನೂತನ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸುದುಪಯೋಗ ಪಡೆದುಕೊಳ್ಳಬೇಕು ಎಂದರು.
ಭೀಮಾಶಂಕರ ಬೊಮ್ಮನಹಳ್ಳಿ, ಉಪನ್ಯಾಸಕ ಜಗದೀಶ ಜ್ಯೋತಿ, ಉಪನ್ಯಾಸ ನೀಡಿದರು. ರಾಜಣ್ಣಗೌಡ, ಶಿವಶರಣಪ್ಪ ಶಿರವಾಳ, ಶಾಂತಪ್ಪ ಇಂದೂರ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ಭೀಮಾಶಂಕರ ಇಂದೂರ ಸ್ವಾಗತಿಸಿದರು. ಸಿದ್ದು ಹಡಪದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement