ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹ

Rashmi Kasaragodu
Updated On : 21 Aug 2013, 12:19 pm

ದೇವದುರ್ಗ: ತಾಲೂಕಿನ ಮುಂಡರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿಗೆ ಆಗ್ರಹಿಸಿ ಶಾಲಾ ಸುಧಾರಣಾ ಸಮಿತಿ ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ 375 ಜನ ಮಕ್ಕಳಿದ್ದು, ಒಟ್ಟು 12 ಜನ ಶಿಕ್ಷಕರ ಹುದ್ದೆಗಳಲ್ಲಿ ಕೇವಲ 5 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಿಂದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿಯೇ ಒಬ್ಬರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.
ಶಾಲೆಯಲ್ಲಿ ಸಮರ್ಪಕ ಕೊಠಡಿಗಳಿಲ್ಲ. ಮಳೆ ಬಿದ್ದರೆ ಕೊಠಡಿಗಳು ಸೋರುತ್ತವೆ. ಮಕ್ಕಳಿಗೆ ಕುಡಿವ ನೀರು, ಶೌಚಾಲಯವಿಲ್ಲ. ಇಂತಹ ಪರಿಸ್ಥಿತಿ ಅರಿತ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಮೊರೆ ಹೋದರೆ, ಕಡು ಬಡವರ ಮಕ್ಕಳು ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಿದೆ. ಕಾರಣ ಕೂಡಲೇ ಶಾಲೆಗೆ ಅಗತ್ಯವಿರುವ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಎಸ್ಡಿಎಂಸಿ ಅಧ್ಯಕ್ಷ ಗುರುಬಸ್ಸಯ್ಯ ಸ್ವಾಮಿ, ಶಿವಕಾಂತಮ್ಮ, ಸಾಬಣ್ಣ ಹಿರೇಕುರುಬರು, ಮಲ್ಲಪ್ಪ ದಳವಾಯಿ, ಸೇರಿ ವಿದ್ಯಾರ್ಥಿಗಳು ಪಾಲಕರು ಹೋರಾಟದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement