ಅಹಿಂದ ಪದಾಧಿಕಾರಿಗಳ ಆಯ್ಕೆ
ಗುಲ್ಬರ್ಗ: ಕರ್ನಾಟಕ ರಾಜ್ಯ ಅಹಿಂದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಎಚ್. ಪ್ರಕಾಶರವರ ಅಧ್ಯಕ್ಷತೆಯಲ್ಲಿ ನಡೆದ ಗುಲ್ಪರ್ಗ ಜಿಲ್ಲೆಯ ಅಲ್ಪ ಸಂಖ್ಯಾತರ ಹಿಂದುಳಿದ ಮತ್ತು ದಲಿತ ನೌಕರರ (ಅಹಿಂದ) ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಹಾಬಾದ ಸರ್ಕಾರಿ ಪದವೀಧರ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಶಿವಪುತ್ರ ಕೋಣಿನ್ ಅವರನ್ನು ಅಹಿಂದ ಜಿಲ್ಲಾಧ್ಯಕ್ಷರಾಗಿ, ಭೀಮಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಠ್ಠಲ ವಗ್ಗನ ಪ್ರಧಾನ ಕಾರ್ಯದರ್ಶಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಲ್ಲಾವುದ್ದೀನ್ ಸಾಗರ ಅವರನ್ನು ಗೌರವಾಧ್ಯಕ್ಷರಾಗಿ, ಅಫಜಲ್ಪೂರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಪೂಜಾರಿಯನ್ನು ಖಜಾಂಚಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳು ಸಮಸ್ತ ಜಿಲ್ಲೆಯ ಅಹಿಂದ ನೌಕರರ ಹಕ್ಕುಗಳಿಗಾಗಿ ಮತ್ತು ಅವರ ರಕ್ಷಣೆಗಾಗಿ ಕಾರ್ಯತತ್ಪರರಾಗಲು ರಾಜ್ಯಾಧ್ಯಕ್ಷ ಸೂಚಿಸಿದರು.