ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗುಣಾತ್ಮಕ ಶಿಕ್ಷಣಕ್ಕೆ ಸಂಕಲ್ಪ ಅವಶ್ಯ: ಅಬ್ದುಲ್

Rashmi Kasaragodu
Updated On : 22 Aug 2013, 11:28 am

ಕ.ಪ್ರ.ವಾರ್ತೆ  ಶಹಾಪುರ  ಆ.21
ಸರ್ಕಾರ ಹಾಗೂ ಸಮಾಜ ಶಿಕ್ಷಕರಿಗೆ ಉತ್ತಮ ಸ್ಥಾನಮಾನ ನೀಡಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡು ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಯಶಸ್ಸಿಗೆ ಗುಣಾತ್ಮಕ ಶಿಕ್ಷಣ ನೀಡುವುದನ್ನು ಸವಾಲಾಗಿ ಸ್ವೀಕರಿಸಿ ಮನುಕುಲದ ಭರವಸೆಯ ಕುಸುಮಗಳಿಗೆ ಬೆಳಕು ನೀಡಿ ಸಮಾಜದ ಋಣ ತೀರಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗ ವಿಭಾಗದ ಅಪರ ಆಯುಕ್ತ ಅಬ್ದುಲ್ ರಬ್ ಕರೆ ನೀಡಿದರು.
ಇಲ್ಲಿಯ ಬಿ.ಗುಡಿಯಲ್ಲಿನ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರತಿಶತ ನೂರು ಫಲಿತಾಂಶ ಪಡೆದ ಶಾಲೆಗಳ ಮುಖ್ಯಸ್ಥರಿಗೆ ಸನ್ಮಾನ ಹಾಗೂ ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಉತ್ತಮ ಪಡಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ದಿನಗಳಲ್ಲಿ ಪೈಪೋಟಿ ನೀಡುವಂತಾಗಲು ಪ್ರಯತ್ನ ನಡೆಯಬೇಕು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಈಗಿನಿಂದಲೇ ವಿಶೇಷ ಪ್ರಯತ್ನ ನಡೆಯಲಿ ಎಂದರು.
ಯಾದಗಿರಿ, ಶಹಾಪುರ, ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಜರ ಹುಸೇನ್, ಕೆ.ರಾಯಪ್ಪರಡ್ಡಿ, ಕೆಂಪರಂಗಯ್ಯ ಅವರು ಪ್ರಸಕ್ತ ವರ್ಷ ಹಾಕಿಕೊಂಡಿರುವ ಯೋಜನೆಗಳ ಬಗೆ ತಿಳಿಸಿದರು.
ಡಿಡಿಪಿಐ ರಾಮಾಂಜನೇಯ, ಜಿಲ್ಲಾ ಉಪಸಮನ್ವಯಾಧಿಕಾರಿ ಶಾಂತಗೌಡ ಪಾಟೀಲ ಶೈಕ್ಷಣಿಕ ಸುಧಾರಣೆಯ ಕುರಿತು ಮಾತನಾಡಿದರು.
ಇದೇ ಸಂದರ್ಭ ಶೇ.100 ಫಲಿತಾಂಶ ಪಡೆದ ಶಹಾಪುರದ 9 ಶಾಲೆಗಳು, ಯಾದಗಿರಿ 3, ಸುರಪುರದ 7 ಶಾಲೆಗಳ ಮುಖ್ಯಸ್ಥರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.
ಆಯುಕ್ತರ ಕಾರ್ಯಾಲಯದ ಪಿ.ಎಸ್. ಸಕ್ರಪ್ಪ ಗೌಡ ಬಿರಾದಾರ, ಅಕ್ಷರ ದಾಸೋಹ ಸಂಯೋಜನಾದಿಕಾರಿ ಡಿ.ಎಂ. ಹೊಸಮನಿ, ಜಿಲ್ಲಾ ವಿಷಯ ಪರೀವೀಕ್ಷಕ ಬಿ.ವೆಂಕೋಬಾ, ರಾಮಲಿಂಗಪ್ಪ ಟಿ., ಎಂ.ಬಿ. ಚಲುವಾದಿ, ನಿಂಗಪ್ಪ, ಸಮನ್ವಯ ಅಧಿಕಾರಿ ಶಶಿಧರ ಬಿರಾದಾರ, ಸಿದ್ದಣ್ಣಾ ಮಾನಸುಣಗಿ, ಡಯಟ್ ಪ್ರಾಚಾರ್ಯರಾದ  ಟಿ.ಜಿ.ಸೈಯಿದಾ ಇದ್ದರು.
ಶಿಕ್ಷಣ ಸಂಯೋಜಕ ರಾಮಭಟ್ ಜೋಶಿ ಕಾರ್ಯಕ್ರರ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement