ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗ್ರಾಮಾಭಿವೃದ್ಧಿ ಯೋಜನೆ: ಸಮಾಲೋಚನಾ ಸಭೆ

Rashmi Kasaragodu
Updated On : 22 Aug 2013, 11:27 am

ದೇವದುರ್ಗ: ಗ್ರಾಮೀಣ ಪ್ರದೇಶದ ಪ್ರತಿಯೊಂದೂ ಕುಟುಂಬ ಶಿಕ್ಷಣ, ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದಬೇಕಿದೆ. ಇದು ಧರ್ಮಸ್ಥಳ ಯೋಜನೆ ಬಯಸುತ್ತಿದೆ ಎಂದು ದೇವದುರ್ಗ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ತಿಳಿಸಿದರು.
ಅವರು ಈಚೆಗೆ ತಾಲೂಕಿನ ಗಲಗ ಗ್ರಾಮದ ಸಮುದಾಯ ಭವನದಲ್ಲಿ ಸಾರ್ವಜನಿಕರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ಸ್ವ-ಸಹಾಯ ಸಂಘಗಳ ಮೂಲಕ ಕುಟುಂಬಗಳು ಆರ್ಥಿಕವಾಗಿ  ಬಲವರ್ಧನೆಯಾಗಲು ಸಾಧ್ಯ ಎಂದರು.
ಸ್ವಚ್ಛತೆ ಹಾಗೂ ಅರಿವಿನ ಮೂಲಕ ಪ್ರಜ್ಞಾವಂತರಾಗುವಂತೆ ಪ್ರೇರಣೆ ನೀಡುವ ಉದ್ದೇಶ ಸಂಸ್ಥೆ ಹೊಂದಿದ್ದು, ಕಾರ್ಯಕ್ರಮವನ್ನು ಅರ್ಥೈಸಿಕೊಂಡು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರು ಪಾಲ್ಗೊಂಡು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಸಂಸ್ಥೆಯ ಮನವಿ ಮಾಡಿದರು.
ಗ್ರಾ.ಪಂ. ಅಧ್ಯಕ್ಷ ತಿರುಪತಿ ಪಾಮರತಿ ಸಭೆಗೆ ಚಾಲನೆ ನೀಡಿದರು. ಗ್ರಾಪಂ ಸದಸ್ಯ ದುರ್ಗಪ್ಪಗೌಡ ಪಾಟೀಲ್, ಜಲಾಲ್ ಸಾಬ್, ಪಿಡಿಒ ರಾಮರೆಡ್ಡಿ ಪಾಟೀಲ್ ಮತ್ತು ಗ್ರಾಮದ ಪ್ರಮುಖರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement