ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಲ್ಡ್ಟೆಕ್ನಿಂದ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ

Rashmi Kasaragodu
Updated On : 22 Aug 2013, 11:28 am

ಯಾದಗಿರಿ: ಆಕರ್ಷಕ ಮನೆ ನಿರ್ಮಾಣಕ್ಕೆ ಅಗತ್ಯವಿರುವ ವಸ್ತುಗಳು ಒಂದೇ ಕಡೆ ದೊರಕಿಸಿ, ಮನೆ ಅಲಂಕಾರಕ್ಕೆ ತಂತ್ರಜ್ಞರ ಮಾರ್ಗದರ್ಶನ ನೀಡುವ ಹಿನ್ನೆಲೆಯಲ್ಲಿ ಬೆಂಗಳೂರಿನ ಯುಎಸ್ ಕಮ್ಯುನಿಕೇಶನ್ನಿಂದ ನಗರದಲ್ಲಿ ಆ. 23ರಿಂದ ಮೂರು ದಿನಗಳ ಕಟ್ಟಡ ಸಾಮಗ್ರಿಗಳ ಬಿಲ್ಡ್ಟೆಕ್ 2013 ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕಮ್ಯುನಿಕೇಶನ್ನ ಮುಖ್ಯಸ್ಥ ಉಮಾಪತಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರದರ್ಶನದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಟ್ಟಡ ಸಾಮಗ್ರಿ ಉತ್ಪಾದಕರು ಪಾಲ್ಗೊಳ್ಳಲಿದ್ದಾರೆ. ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆ. 23ರಿಂದ 25ರವರೆಗೆ ಮೂರು ದಿನಗಳವರೆಗೆ ಈ ಪ್ರದರ್ಶನ ನಡೆಯಲಿದೆ. ಸ್ಥಳೀಯ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದರು.
ಅಗತ್ಯ ತಂತ್ರಜ್ಞಾನ: ಅಲ್ಟ್ರಾಟೆಕ್ ಸಿಮೆಂಟ್ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಅಶೋಕ ರೆಡ್ಡಿ ಮಾತನಾಡಿ, ಮನೆ ಒಳ ಹಾಗೂ ಹೊರ ಭಾಗ ಹೊಸತನದಿಂದ ಕೂಡಿರಲು, ಅದಕ್ಕೆ ಅಗತ್ಯ ತಂತ್ರಜ್ಞಾನ ಒದಗಿಸುವುದೂ ಸೇರಿದಂತೆ ಮನೆ ನಿರ್ಮಾಣದ ಆರಂಭದಿಂದ ಪೂರ್ಣಗೊಳ್ಳುವವರೆಗಿನ ಮಾಹಿತಿಯನ್ನು ನೀಡಲಾಗುವುದು. ಕಟ್ಟಡ, ಗೃಹಾಲಂಕಾರ ಸಾಮಗ್ರಿ, ಸಿಮೆಂಟ್, ಗ್ರಾನೈಟ್, ಎಲೆಕ್ಟ್ರಿಕಲ್, ಬಾತ್ ಫಿಟ್ಟಿಂಗ್, ಕಿಟಕಿ, ಗಾಜು, ಸೋಲಾರ್, ಪೀಠೋಪಕರಣಗಳು, ಮಾಡ್ಯುಲರ್ ಅಡುಗೆ ಮನೆ ಮುಂತಾದವುಗಳ ವಸ್ತು ಪ್ರದರ್ಶನವಿದೆ. ಕಲಾತ್ಮಕ ಮನೆ ಪ್ರತಿಯೊಬ್ಬರದ್ದಾಗಬೇಕು ಎಂಬ ಆಶಯದಲ್ಲಿ ರಾಜ್ಯಾದ್ಯಂತ ಪ್ರದರ್ಶನ ಏರ್ಪಡಿಸಲಾಗಿದೆ. 50-60ರಷ್ಟು ವಿವಿಧ ಕಂಪನಿಗಳು ಪಾಲ್ಗೊಳ್ಳಲಿವೆ. ಇದನ್ನು ಅಲ್ಟ್ರಾಟೆಕ್ ಸಿಮೆಂಟ್ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದೆ. ಒಂದೇ ಸೂರಿನಡಿಯಲ್ಲಿ ಆಧುನಿಕ ತಂತ್ರಜ್ಞಾನ, ಕಟ್ಟಡ ಸಾಮಗ್ರಿಗಳ ಬಗ್ಗೆ ಮಾಹಿತಿ ತಿಳಿಸುವುದು ಉದ್ದೇಶ. ಇದರ ಪ್ರಯೋಜನ ಜಿಲ್ಲೆಯ ಜನತೆ ಪಡೆದುಕೊಳ್ಳಬೇಕು ಎಂದರು. ಸಂಗಮೇಶ, ಚೇತನ ಪಾಟೀಲ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement