ವಿದ್ಯಾರ್ಥಿಗೆ ಕಾನೂನು ಅರಿವಿರಲಿ: ನ್ಯಾ.ಭಾರತಿ
ಸಿಂಧನೂರು: ವಿದ್ಯಾರ್ಥಿ ದಿಸೆಯಿಂದಲೇ ಕಾನೂನಿನ ತಿಳುವಳಿಕೆ ಹೊಂದಬೇಕಾದ ಅಗತ್ಯತೆ ಇದೆ. ಇದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಸಹಕಾರಿಯಾಗಬಲ್ಲದು ಎಂದು ಸಿವಿಲ್ ಪ್ರಧಾನ ನ್ಯಾಯಾಧೀಶೆ ಭಾರತಿ ಎಸ್.ರಾಯಣ್ಣವರ್ ಅಭಿಪ್ರಾಯಟ್ಟರು.
ಅವರು ನಗರದ ಕರ್ನಾಟಕ ಕಾಲೇಜಿನಲ್ಲಿ ತಾಲೂಕ ಕಾನೂನ ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಜೀವಿತದುದ್ದಕ್ಕೂ ಹಲವಾರು ಬಗೆಯಲ್ಲಿ ಶೋಷಣೆಗೆ ಒಳಗಾಗುತ್ತಿರುವುದರ ಹಿಂದೆ ಕಾನೂನಿನ ಬಗ್ಗೆ ಹಲವಾರು ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಕಾನೂನಿನ ಜ್ಞಾನ ಅತ್ಯವಶ್ಯಕ ಎಂದು ಹೇಳಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿ ವಿದ್ಯಾರ್ಥಿ ಯುವಜನರು ಕಾನೂನಿನ ಅರಿವು ಪಡೆದು ಸಮಾಜ ಬಾಹಿರ ಕೆಲಸಗಳಿಂದ ದೂರವಿದ್ದರೆ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು. ಎ.ಪಿ.ಜಿ.ಶೇಖರಪ್ಪ ಶಾಲಿಗನೂರು ಮಾತನಾಡಿ ಪ್ರತಿಯೊಬ್ಬರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಕಾನೂನಿನ ಚೌಕಟ್ಟಿನ ಮಿತಿಯಲ್ಲಿ ಕೆಲಸ ಕೈಗೊಳ್ಳಬೇಕು ಎಂದರು.
ನ್ಯಾಯವಾದಿ ಶೇಖರಪ್ಪ ಧುಮತಿ, ಡಿ.ಎಚ್.ಕಂಬಳಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಉರುಕುಂದಿಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಶಂಕರ ಗುರಿಕಾರ ಸ್ವಾಗತಿಸಿದರು. ನಾರಾಣಯ ಬೆಳಗುರ್ಕಿ ನಿರೂಪಿಸಿದರು. ಹನುಮೇಶ ಗುಡದೂರು ವಂದಿಸಿದರು. ವಕೀಲರಾದ ಹನುಮೇಶ ಕೊಡ್ಲಿ, ಶರಣಬಸವ ಮಾಡಶಿರವಾರ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು. ಇದ್ದರು.