ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಸಿ ನೆಡುವ ಕಾರ್ಯಕ್ರಮ

Rashmi Kasaragodu
Updated On : 22 Aug 2013, 11:31 am
ಗುಲ್ಬರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಜೀವ ಗಾಂಧಿ ಅಕ್ಷಯ ಉರ್ಜಾ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಪಂ ಉಪಾಧ್ಯಕ್ಷೆ ಪಾರ್ವತಿ ಶಂಕರ ಚವ್ಹಾಣ ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಎಸ್.ಎಂ. ಕೆಂಚಣ್ಣನವರ್, ಸಹಾಯಕ ಯೋಜನಾ ಅಧಿಕಾರಿ ಎಸ್.ಎಂ. ಅಳ್ವಿ, ಎಇ ಸೂರ್ಯಕಾಂತ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿಗಳು ಶಿವಶರಣಪ್ಪ ಭೂಸನೂರ, ಪ್ರಾದೇಶಿಕ ಅರಣ್ಯ ಅಧಿಕಾರಿ ಸಿ.ಎಂ. ಅರಿಕೇರಿ, ಅರಣ್ಯಾಧಿಕಾರಿ ಗುರುಶಾಂತಪ್ಪ, ವೈದ್ಯಾಧಿಕಾರಿ ಬಾಬುರಾವ ಚವ್ಹಾಣ, ವಿಶ್ವ ಸೇವಾ ಮಿಷನ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಸ್ವಾಮೀಜಿ ಹಾಗೂ ಜಿಪಂ ಡಿಆರ್ಡಿಎ ಶಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಾಣಾಯಾಮ ಶಿಬಿರ ಮುಕ್ತಾಯ
ಗುಲ್ಬರ್ಗ/ಶಹಾಬಾದ್: ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್ ಗುಲ್ಬರ್ಗ ಹಾಗೂ ಲಾಯನ್ಸ್ ಕ್ಲಬ್ ಶಹಾಬಾದ್ ಆಶ್ರಯದಲ್ಲಿ ಪಟ್ಟಣದ ಅಲಸ್ಟಾಂ ಕಾಲೋನಿಯ ಲಾಯನ್ಸ್ ಕ್ಲಬ್ನಲ್ಲಿ ಆಯೋಜಿಸಿದ 5 ದಿನಗಳಿಂದ ನಡೆದ ಉಚಿತ ಸಾರ್ವಜನಿಕರಿಗಾಗಿ ಯೋಗ, ಪ್ರಾಣಾಯಾಮಾ ಶಿಬಿರ ಬುಧವಾರ ಮುಕ್ತಾಯಗೊಂಡಿತು. ನಗರದ ಯೋಗ ಶಿಕ್ಷಕ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನೀಲ್ ಜಿಂದೆ ಯೋಗ ತರಬೇತಿ ನೀಡಿ, ಆಯುರ್ವೇದ ಹಾಗೂ ಸ್ವದೇಶಿ ಗಿಡಮೂಲಿಕೆ ಹಾಗೂ ಆಹಾರ ಪದ್ಧತಿ ಕ್ರಮವನ್ನು ಯೋಗ ಸಾಧಕರಿಗೆ ತಿಳಿಸಿ ಕೊಟ್ಟರು. ಈ ಶಿಬಿರದಲ್ಲಿ ಆಯುರ್ವೇದ ಸಸ್ಯಗಳ ಉಪಯೋಗಗಳ ಬಗ್ಗೆ ಅಲಸ್ಟಾಂ ಕಾರ್ಖಾನೆ ತೋಟಗಾರಿಕೆ ತಜ್ಞ ಆರ್.ಎ. ಮಹೀಂದ್ರಕರ್ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ಔಷಧಿ ಸಸಿಗಳ ವಿತರಣೆ ಮಾಡಲಾಯಿತು. ಅಲಸ್ಟಾಂ ಕಾರ್ಖಾನೆಯ ಮುಖ್ಯಸ್ಥರಾದ ರಾಜೀಬ್ ಘೋಷ, ಎಸ್.ಆರ್. ಗುರಗೋಳ, ಸುಧೀರ್ ಹುಲಿ, ಎನ್. ಬಾಲಸುಬ್ರಮಣ್ಯಂ, ಶ್ರೀಕಾಂತ ಜೋಶಿ, ಡಿ.ಎಸ್. ಬಿರಾದಾರ, ಎಚ್.ಬಿ. ತೀರ್ಥೆ ಇತರರು ಭಾಗವಹಿಸಿದ್ದರು. ನಗರದ ಮಕ್ಕಳು, ಸ್ತ್ರೀಯರು ಹಾಗೂ ಪುರುಷರು ಈ ಯೋಗ ಶಿಬಿರದ ಲಾಭ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement