25ಕ್ಕೆ ಉಚಿತ ಶಸ್ತ್ರಚಿಕಿತ್ಸಾ ಶಿಬಿರ
ರಾಯಚೂರು: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆ.25ರಂದು ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಅಡಿ ಉಚಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ರವರೆಗೆ ನಡೆಯುವ ಶಿಬಿರದಲ್ಲಿ ಹೃದಯ, ನರರೋಗ, ಕ್ಯಾನ್ಸರ್, ಸುಟ್ಟ ಗಾಯಗಳು (ಪ್ಲಾಸ್ಟಿಕ್ ಸರ್ಜರಿ), ಮೂತ್ರಪಿಂಡದ ತೊಂದರೆ ಹಾಗೂ ಚಿಕ್ಕಮಕ್ಕಳ ಕಾಯಿಲೆಗಳ ಕುರಿತು ತಪಾಸಣೆ ನಡೆಸಲಾಗುವುದು.
ಈ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ವೈದೇಹಿ ಆಸ್ಪತ್ರೆಯ ನುರಿತ ವೈದ್ಯ ತಜ್ಞರು ಭಾಗವಹಿಸಲಿದ್ದು, ಬಿಪಿಎಲ್ ಕಾರ್ಡು ಹೊಂದಿರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ ಎಂದು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
--