ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಲಿತರಿಗೆ ಪಟ್ಟಾ: 25ಕ್ಕೆ ಸಿಎಂಗೆ ಮುತ್ತಿಗೆ

Lingaraj Badiger
Updated On : 23 Aug 2013, 11:15 am

ರಾಯಚೂರು: ದಲಿತರಿಗೆ ಭೂಮಿ ಪಟ್ಟಾ ವಿತರಣೆಗೆ ಆಗ್ರಹ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.25ರಂದು ಸಿಂಧನೂರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯಗೆ ನಿವೇಶನ ಹಾಗೂ ಭೂ ಹೋರಾಟ ಸಮಿತಿ ಘೇರಾವ್ ಹಾಕಲಿದೆ ಎಂದು ಸಮಿತಿ ಅಧ್ಯಕ್ಷ ಡಿ.ಎಚ್. ಪೂಜಾರ್ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸಿಂಧನೂರು ಹಾಗೂ ಮಸ್ಕಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಕ್ರಮವಾಗಿ ಕಾಯಿದೆಗಿಂತ ಕೆಲ ವ್ಯಕ್ತಿಗಳು ಹೆಚ್ಚುವರಿ ಭೂಒಡೆತನ ಹೊಂದಿದ್ದಾರೆ. ಅಂಥ ಪ್ರಕರಣಗಳನ್ನು ಪರಿಶೀಲಿಸಬೇಕು. ಬಡವರು, ದಲಿತರಿಗೆ ಭೂಮಿ ಪಟ್ಟಾ ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶದ ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸುವಂತೆ ಸಿಎಂರನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಸಿಂಧನೂರಿನ ಮಾಜಿ ಶಾಸಕ ಜವಳಗೇರಾ ನಾಡಗೌಡರ ಅವಿಭಕ್ತ ಕುಟುಂಬಕ್ಕೆ ಸೇರಿದ 3600 ಎಕರೆ ಹೆಚ್ಚುವರಿ ಜಮೀನಿದ್ದು, ಈ ಕುರಿತು ಸಮಗ್ರ ಪುನಾ ಪರಿಶೀಲನೆ ನಡೆಸಬೇಕಿದೆ. ಜಿಲ್ಲೆಯಲ್ಲಿ ಕಳೆದ 40 ವರ್ಷಗಳಿಂದ ಹೆಚ್ಚುವರಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಬಡವರು ಹಾಗೂ ದಲಿತರಿಗೆ ಆ ಜಮೀನಿನ ಪಟ್ಟಾ ವಿತರಿಸಬೇಕೆಂದು ಸಿಎಂಗೆ ಘೇರಾವ್ ಹಾಕಿ ಆಗ್ರಹಿಸಲಾಗುತ್ತದೆ ಎಂದರು.
ಸಿಂಧನೂರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಗಡಿಸಲು ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರುವ ನಿಟ್ಟಿನಲ್ಲಿ ಘೇರಾವ್ ಹಾಕುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ಇದುವರೆಗೆ ನಡೆಸಿದ ಹೋರಾಟಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement