ಪಠ್ಯೇತರ ಚಟುವಟಿಕೆಗೂ ಪ್ರಾಶಸ್ತ್ಯ ನೀಡಲು ಸಲಹೆ
ದೇವದುರ್ಗ: ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳೂ ಸಹ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಅದರಿಂದ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ಯುವ ಮುಖಂಡ ಬಿ.ವಿ. ನಾಯಕ ಹೇಳಿದರು.
ಅವರು ಈಚೇಗೆ ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಅರಕೇರಾ ಹೋಬಳಿ ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಪಟುಗಳು ಸೋಲಿನಿಂದ ಹತಾಶರಾಗದೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗಲಗ ಜಿಪಂ ಸದಸ್ಯ ಶಿವಣ್ಣ ತಾತಾ, ಆಲ್ಕೋಡ ಗ್ರಾಪಂ ಅಧ್ಯಕ್ಷ ರೋವಪ್ಪ, ತಾಪಂ ಸದಸ್ಯ ಬಸವರಾಜ ನಾಯಕ, ಬಸ್ಸಯ್ಯ ಶಾಖೆ, ಶರಣಗೌಡ ಗಣೇಕಲ್, ಭೀಮನಗೌಡ ನಾಗಡದಿನ್ನಿ, ಹನುಮಂತ್ರಾಯ ಶಾಖೆ, ರವಿ ಪಾಟೀಲ್, ಭೀಮರಾಯ ನಾಯಕ, ನರಸಣ್ಣ ತಾತ, ಸಿದ್ದಪ್ಪ, ಹನುಮಯ್ಯ ಹರಳಿ ಬಂಡೆ, ಸಿ.ಎಸ್. ಸಿಂಧ್ಯೆ, ಸಿಆರ್ಪಿ ಆದನಗೌಡ ಮರಕಮದಿನ್ನಿ ಸೇರಿ ಅನೇಕರಿದ್ದರು.