ಮೂಲ ಸಾಕ್ಷರತಾ ಪರೀಕ್ಷೆ ಸಭೆ
ದೇವದುರ್ಗ: ಹಿಂದುಳಿದ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ಸಾಕ್ಷರತೆ ಹೆಚ್ಚಿಸಲು ಪ್ರೇರಕರ ಪರಿಶ್ರಮ ಅವಶ್ಯಕ. ಸಮುದಾಯ ಸಹಕಾರ ನೀಡಬೇಕಿದೆ ಎಂದು ಜಿಲ್ಲಾ ಸಾಕ್ಷರತಾ ಕಾರ್ಯಕ್ರಮ ಸಹಾಯಕ ಯಲ್ಲಪ್ಪ ಜಾಲಿಬೆಂಚಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಈಚೇಗೆ ತಾಲೂಕು ಲೋಕ ಶಿಕ್ಷಣ ಸಮಿತಿ ವತಿಯಿಂದ ನಡೆದ ರಾಷ್ಟ್ರೀಯ ಸಾಕ್ಷರತಾ ಮಿಷಿನ್ ಮತ್ತು ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆಯವರ ಸಹಯೋಗದಲ್ಲಿ ರಾಷ್ಟ್ರಾದ್ಯಂತ ನಡೆಯುವ ಮೂಲ ಸಾಕ್ಷರತಾ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಲೇಜಿನ ಉಪನ್ಯಾಸಕ ಸಂತೋಷಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ 28 ಗ್ರಾಪಂ ಮುಖ್ಯ ಅಧೀಕ್ಷಕರು, ವೀಕ್ಷಕರು, ಸಾಕ್ಷರತಾ ಪ್ರೇರಕರು ಹಾಜರಿದ್ದರು. ಗುರುಲಿಂಗಯ್ಯ ಕೋಡಿಮಠ, ತಾಲೂಕ ಸಂಯೋಜಕ ಮುರಿಗೆಪ್ಪ ಬಳೆ, ಶಿವಪುತ್ರಪ್ಪ, ಜಾನವೆಸ್ಲಿ, ಯಂಕೋಬ ಬುಂಕಲದೊಡ್ಡಿ, ನಾಗಪ್ಪ ಆಲ್ಕೋಡ್, ಬಿ.ಎಂ. ನಾಯಕ, ಬಂದೇನವಾಜ್ ನಾಗಡದಿನ್ನಿ ಸೇರಿ ಅನೇಕರಿದ್ದರು.