ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿಶ್ವ ಛಾಯಾಗ್ರಾಹಕರ ದಿನಾಚರಣೆ

Lingaraj Badiger
Updated On : 23 Aug 2013, 11:15 am

ದೇವದುರ್ಗ: ಪಟ್ಟಣದ ಗುರುಭವನದಲ್ಲಿ ತಾಲೂಕು ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ತಹಸೀಲ್ದಾರ್ ತುಕಾರಾಮ್ ಕಲ್ಯಾಣಕರ್ ಚಾಲನೆ ನೀಡಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಲು ಛಾಯಾಗ್ರಾಹಕರು ಸಂಘಟಿತರಾಗುವುದು ಅವಶ್ಯಕ. ಛಾಯಾಚಿತ್ರ, ಚಿತ್ರಕಲೆ ಮತ್ತು ಸಾಹಿತ್ಯ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿವೆ. ಛಾಯಾಚಿತ್ರ ಮತ್ತು ಚಿತ್ರಕಲೆ ಸಮಾಜದ ಎರಡು ಕಣ್ಣುಗಳಿದ್ದಂತೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಸೇವಾ ಮನೋಭಾವದೊಂದಿಗೆ ಒಳ್ಳೆಯ ಛಾಯಾಚಿತ್ರಗಾರರಾಗಲು ಸಲಹೆ ನೀಡಿದರು.
ಸನ್ಮಾನಿತರಾಗಿ ಮಹಾಮುನಿ, ರಾಜು ಇಲ್ಲೂರು, ಕೆ. ವಿಜಯ ಕುಮಾರ ಮಾತನಾಡಿದರು. ವೇದಿಕೆಯಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಸಿ.ಎಸ್. ಶಿಂಧೆ, ಸಂಘದ ಗೌರವಾಧ್ಯಕ್ಷ ಚನ್ನಪ್ಪ ಹುಣಿಸಿಗಿಡ, ಲಿಂಗಸ್ಗೂರು ತಾಲೂಕಾಧ್ಯಕ್ಷ ಸಿದ್ದು ಬಡಿಗೇರ್, ಸಂಗಮೇಶ ಹರವಿ, ರವಿಕುಮಾರ ಸೂರ್ವವಂಶಿ, ಗುರುನಾಥ ಉಭಾಳೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement