ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಉದ್ಯಾನ ಜಾಗ ಮಾರಾಟ: ನಗರಸಭೆ ಮೌನ

Lingaraj Badiger
Updated On : 24 Aug 2013, 11:05 am

ಸಿಂಧನೂರು: ನಗರದ ಕುಷ್ಟಗಿ ರಸ್ತೆಯ ಸಂತೋಷ್ ವೇಬ್ರಿಡ್ಜ್ ಪಕ್ಕದಲ್ಲಿ ಅನುಮೋದನೆ ಪಡೆಯಲಾಗಿರುವ ಕಾಯ್ದಿರಿಸಿದ ಉದ್ಯಾನವನ ಜಾಗ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಶಾಂತಯ್ಯ ತಂದೆ ಶಾಂತವೀರಯ್ಯ ಎನ್ನುವರ ಒಡೆತನದ ಲೇಔಟ್‌ನಲ್ಲಿ ಉದ್ಯಾನವನ ಜಾಗದಲ್ಲಿ ನಿವೇಶನದ ಮಾರಾಟಕ್ಕೆ ಗುರುತು ಕಲ್ಲುಗಳನ್ನು ಹಾಕಲಾಗಿದ್ದು, ಒಂದೆರಡು ನಿವೇಶನಗಳನ್ನು ಈಗಾಗಲೇ ಬೇನಾಮಿಯಾಗಿ ಮಾರಾಟ ಮಾಡಿದ್ದಾರೆ. ಈಗಾಗಲೇ ಸಿಂಧನೂರ ನಗರದಲ್ಲಿ ಭಾಗಶಃ ಉದ್ಯಾನವನ ಜಾಗಗಳನ್ನು ಅನಧಿಕೃತವಾಗಿ ಮಾರಾಟ ಮಾಡಿದ ಅನೇಕ ಉದಾಹರಣೆಗಳ ಸಾಲಿಗೆ ಈ ಉದ್ಯಾನವನವು ಹೊಸ ಸೇರ್ಪಡೆಯಾಗಿದೆ.
ಗಂಗಾನಗರ ನಿವಾಸಿಗಳು ಇತ್ತೀಚೆಗೆ ಅಕ್ರಮ ಮಾರಾಟ ಕುರಿತಂತೆ ನಗರಸಭೆ ಹಾಗೂ ನಗರ ಯೋಜನಾಪ್ರಾಧಿಕಾರಕ್ಕೆ ದೂರು ನೀಡಿದರೂ ಸಹಿತ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ಅನಧಿಕೃತ ಮಾರಾಟಕ್ಕೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದಾರೆ. ನಿವಾಸಿಗಳಿಗೆ ಉಪಯೋಗವಾಗಬೇಕಿದ್ದ ಉದ್ಯಾನವನ ಜಾಗ ಕೆಲವರ ಹಣದ ತೆವಲಿಗೆ ಬಲಿಯಾಗಿ ಮಾರಾಟವಾಗುವ ಮುನ್ನ ನಗರಸಭೆ ಎಚ್ಚೆತ್ತುಕೊಳ್ಳಬೇಕಾಗಿದೆ. ಮುಗ್ದ ನಾಗರಿಕರು ನಿವೇಶನ ಖರೀದಿಸಿ ತೊಂದರೆಗೆ ಸಿಲುಕುವ ಮುನ್ನ ಸೂಕ್ತ ಕ್ರಮಕೈಗೊಳ್ಳದಿದ್ದರೆ ಆ.25 ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಘೇರಾವ್ ಹಾಕಿ ಮನವಿ ಮಾಡುವುದಾಗಿ ನಿವಾಸಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement