ವಿಜೃಂಭಣೆಯಿಂದ ನಡೆದ ರಾಯರ ರಥೋತ್ಸವ
ಕ.ಪ್ರ ವಾರ್ತೆ ಸಿಂಧನೂರು ಆ.23
ನಗರದ ಬ್ರಾಹ್ಮಣರ ಓಣಿಯಲ್ಲಿರುವ ರಾಮಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ವಿಜೃಂಭಣೆಯಿಂದ ಗುರುರಾಯರ ರಥೋತ್ಸವ ಜರುಗಿತು.
ಮಧ್ಯಾಹ್ನ 1ಕ್ಕೆ ಶ್ರೀರಾಮ ಮಂದಿರದಿಂದ ಶೆಟ್ಟರ ಜಿನ್ನದವರೆಗೆ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿದ್ದವು. ಅನ್ನ ಸಂತರ್ಪಣೆಯನ್ನು ನೂತನ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ವೆಂಕಣ್ಣಾಚಾರ್ ಜೋಷಿ ದೋಟಿಹಾಳ ಹಾಗೂ ಅವರ ಕುಟುಂಬ ವ್ಯವಸ್ಥೆ ಮಾಡಿದ್ದರು. ನಂತರ ತೊಟ್ಟಿಲು ಸೇವೆ ನಡೆಯಿತು.
ಮಂತ್ರಾಲಯ ಪ್ರಭು: ಇದೇ ಸಂದರ್ಭದಲ್ಲಿ ವೆಂಕಣ್ಣಾಚಾರ್ ಜೋಷಿ, ಮಂಜುನಾಥ ಜೋಷಿ, ಭೀಮಾಚಾರ್ಯ ನವಲಿ ಅವರನ್ನು ಸನ್ಮಾನಿಸಲಾಯಿತು. ಮಂತ್ರಾಲಯ ಪ್ರಭು ವಿಶೇಷ ಸಂಚಿಕೆಯನ್ನು ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ ಬಿಡುಗಡೆ ಮಾಡಿದರು.
ರಥೋತ್ಸವದಲ್ಲಿ ಮುಖಂಡರಾದ ಮಠಾಧಿಕಾರಿ ನರಸಿಂಹಾಚಾರ್ ಪುರೋಹಿತ, ಶೇಷಗಿರಿರಾವ್ ಚನ್ನಳ್ಳಿ, ನರಸಿಂಗರಾವ್ ಚನ್ನಳ್ಳಿ, ಶ್ಯಾಮಾಚಾರ್ ಕಂಗಲ್, ಜಿ.ವಿ. ಜೋಷಿ, ನಗರಸಭೆ ಸದಸ್ಯ ವೆಂಕಟರಾವ್ ಬಂಡಿ, ಸಾಲಗುಂದಿ ರಂಗನಾಥಾಚಾರ್ಯ, ಶೇಷಾಶಯನಾಚಾರ್ಯ ಜೋಷಿ, ನಾಗೇಂದ್ರಕುಮಾರ ಸಾಹುಕಾರ, ಕಿಶನ್ ರಾವ್ ಅಲಬನೂರ, ಸುಧಿಂದ್ರಕುಲಕರ್ಣಿ, ಕರಡೋಣಿ ವೆಂಕೋಬರಾವ್, ವೆಂಕಟೇಶ ಕೆಂಗಲ್, ಹನುಮಂತಾಚಾರ್ ಮಸ್ಕಿ, ಕೃಷ್ಣಶಾಸ್ತ್ರಿ, ಹನುಮೇಶ ಜಾಗೀರದಾರ ಭಾಗವಹಿಸಿದ್ದರು.