ಹಿಂದಿ ಪರೀಕ್ಷೆ: ನಿಷೇಧಾಜ್ಞೆ ಜಾರಿ
ರಾಯಚೂರು: ನಗರದ ಹಿಂದಿ ಶಿಕ್ಷಕ ತರಬೇತಿ ವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ಆ.26 ರಿಂದ ಸೆ.4 ರವರೆಗೆ ಹಿಂದಿ ಶಿಕ್ಷಕ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆ ನಕಲು ತಡೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಆದೇಶ ಹೊರಡಿಸಿದ್ದು, ಯಾವುದೇ ರೀತಿಯ ನಕಲು ಅವ್ಯವಹಾರ ನಡೆಯದಂತೆ ಕ್ರಮ ಜರುಗಿಸಬೇಕು. ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ನಿಯೋಜಿತ ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಿರುವ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಪಠ್ಯಪುಸ್ತಕ, ಕ್ಯಾಲುಕ್ಯುಲೆಟರ್ ಕೊಂಡೊಯ್ಯುವುದನ್ನು ನಿಷೇಧಿಸಿದ್ದಾರೆ.
ಸೆ.1ಕ್ಕೆ ಶ್ರಾವಣ ಮಾಸದ ಉತ್ಸವ
ರಾಯಚೂರು: ನಗರದ ಮಾವಿನಕೆರೆ ದಂಡೆಯ ಶ್ರೀನರಸಿಂಹಸ್ವಾಮಿ ದೇವರ ಶ್ರಾವಣ ಮಾಸಕ ಉತ್ಸವ ಕಾರ್ಯಕ್ರಮಗಳು ಆ.8ರಿಂದ ಆರಂಭವಾಗಿದ್ದು, ಸೆ.1ರಂದು ರಥೋತ್ಸವ ಜರುಗಲಿದೆ.
ಅಂದು ಸಂದಜೆ 5.30ಕ್ಕೆ ದೇವಸ್ಥಾನದ ನೂತನ ರಥೋತ್ಸವ ಕಾರ್ಯಕ್ರಮ ಜರುಗಲಿದೆ. ಭಕ್ತರು ಪಾಲ್ಗೊಂಡು ಅನುಗ್ರಹಕ್ಕೆ ಪಾತ್ರರಾಗಲು ಕೋರಲಾಗಿದೆ.