ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಾಳು ಕಟ್ಟದ ಸಜ್ಜೆ ಬೆಳೆ: ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹ

Mainashree
Updated On : 25 Aug 2013, 11:04 am

ಲಿಂಗಸ್ಗೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬಿತ್ತನೆ ಮಾಡಿದ ಸಜ್ಜೆ ಕಾಳು ಕಟ್ಟದೆ ಗೊಡ್ಡು ತೆನೆಗಳು ಬಿಟ್ಟಿದ್ದು, ಸಂಬಂಧಿಸಿದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಭಾನುಮತಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆ ಸಕಾಲಕ್ಕೆ ಸುರಿದ ಪರಿಣಾಮ ಶೇ.75ರಷ್ಟು ರೈತರು ಜೂನ್‌ನಲ್ಲಿ ಪಾಯಿನರ ಕಂಪನಿ ಸಜ್ಜೆ ಬೀಜ ಬಿತ್ತನೆ ಮಾಡಿದ್ದಾರೆ. ಸದರಿ ಕಂಪನಿಯ 86 ಎಂ 33 ಹೆಸರಿನ ಸಜ್ಜೆ ಬೆಳೆಯು ಹಿಂದೆಂದೂ ಕಾಣದ ಬೆಳೆ ಬೆಳೆದು ರೈತರಲ್ಲಿ ಸಂತಸ ಮೂಡಿಸಿತ್ತು.
ಆದರೆ, ಪಯಾನಿರ್ 86 ಎಂ 33 ಸಜ್ಜೆಯು ಕಾಳು ಕಟ್ಟುವ ಹಂತದಲ್ಲಿ 100ಕ್ಕೆ ಶೇ.30 ರಿಂದ 50ರಷ್ಟು ಭಾಗ ಸುಂಕ ಕಟ್ಟದೆ ಹೊಲಗಳಲ್ಲಿ ಗೊಡ್ಡು ತೆನೆ ಬಿಟ್ಟಿವೆ. ಉತ್ತಮ ಬೆಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ತಿಮ್ಮಾಪೂರ, ಬಸ್ಸಾಪೂರ, ಗುಡಿಹಾಳ, ಮುದಗಲ್, ಗೌಡೂರು, ಕಡದರಹಾಳ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಕೃಷಿ ಪರಿಣಿತ ತಂಡಗಳಿಂದ ಪಯಾನೀರ್ 86 ಎಂ 33 ಸಜ್ಜೆ ಬೀಜ ಕಾಳು ಕಟ್ಟದೆ ಇರುವುದನ್ನು ಸಮಕ್ಷಮ ವೀಕ್ಷಿಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರಧನ ಕೊಡಿಸುವಲ್ಲಿ ಸೂಕತ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಗ್ರಾಮಗಳ ಪಯಾನೀರ್ 86 ಎಂ 33 ಸಜ್ಜೆ ಬೀಜ ಬಿತ್ತನೆ ಮಾಡಿದ ರೈತರ ಪರವಾಗಿ ನ್ಯಾಯ ಸಮ್ಮತ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ತಾಲೂಕು ಗೌರವಾಧ್ಯಕ್ಷ ಹನುಮಪ್ಪ ಯಡಹಳ್ಳಿ, ತಾಲೂಕು ಅಧ್ಯಕ್ಷ ಅಮರೇಶ ಮಾರಲದಿನ್ನಿ, ಮುದಿಯಪ್ಪ ಮುದಗಲ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement