ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 25 Aug 2013, 11:08 am

ನಾಗರಾಳದಲ್ಲಿ ಅಕ್ರಮ ಗಣಿಗಾರಿಕೆ: ದಾಳಿ-ಯಂತ್ರ ವಶ
ಮುದಗಲ್:  ಇಲ್ಲಿಗೆ ಸಮೀಪದ ನಾಗರಾಳ ಗ್ರಾಮದ ದಾವಲಮಾಲಿಕ್ ದರ್ಗಾದ ಹತ್ತಿರವಿರುವ ಸ.ನಂ.11 ರಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಕಂದಾಯ ಇಲಾಖಾಧಿಕಾರಿಗಳು ದಾಳಿ ಮಾಡಿದ್ದಾರೆ.  ಮುದಗಲ್ಲ ಕಂದಾಯ ನಿರೀಕ್ಷಕ ಹುಲಿಗೆಯ್ಯ ನೇತೃತ್ವದಲ್ಲಿ ದಾಳಿ ನಡೆಸಿ ಆ ಸಮಯದಲ್ಲಿ ಅಲ್ಲಿದ್ದ ಹಿಟಾಚಿ, ಕಾಂಪ್ರೆಷರ್, ನೀರೆತ್ತುವ ಪಂಪ್ ಸೇರಿದಂತೆ 9 ಕಲ್ಲಿ ದಿಮ್ಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕಂದಾಯ ನಿರೀಕ್ಷಕರು ತಹಸೀಲ್ದಾರರಿಗೆ ವರದಿ ಸಲ್ಲಿಸಲಾಗಿತ್ತು. ದೂರು ದಾಖಲಿಸಿಕೊಳ್ಳಲು ನಿರ್ದೇಶಿಸಲಾಗುವುದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸಿಲಿಂಡರ್‌ಗೆ ಬೆಂಕಿ: ತಪ್ಪಿದ ಅನಾಹುತ
ಮುದಗಲ್:  ಪಟ್ಟಣದ ಮುಖ್ಯ ಬಜಾರದ ಬಾಂಡೆ ಅಂಗಡಿಯಲ್ಲಿದ್ದ ಸಿಲಿಂಡರ್‌ನಿಂದ ಗ್ಯಾಸ್ ಸೋರಿ ಬೆಂಕಿ ಹತ್ತಿಕೊಂಡಿತು. ಆದರೆ ಶನಿವಾರ ದಿನ ಮಾರುಕಟ್ಟೆ ಬಂದ್ ಆಗಿದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಬಾಂಡೆದ ಅಂಗಡಿ ಬಂದ ಆಗಿತ್ತು. ಅಂಗಡಿಯಲ್ಲಿ ಇಡಲಾಗಿದ್ದ ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿದ್ದು, ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಆದರೆ, ಸ್ಫೋಟದಂಥ ಘಟನೆ ನಡೆಯಲಿಲ್ಲ. ಬೆಂಕಿ ಹತ್ತಿ ಉರಿಯುತ್ತಿದ್ದರಿಂದ ಹೊಗೆ ಆವರಸಿದ್ದು ಗಮನಿಸಿದ ಜನರು ಅಂಗಡಿ ಬಾಗಿಲು ತೆರೆದು ಬೆಂಕಿ ನಂದಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ. ಬೆಂಕಿ ನಂದಿ ಆದ ಮೇಲೆ ಲಿಂಗಸ್ಗೂರುದಿಂದ ಅಗ್ನಿಶಾಮಕ ವಾಹನ ಆಗಮಿಸಿತು. ಘಟನಾ ಸ್ಥಳಕ್ಕೆ ಪಿಎಸ್‌ಐ ಹಾಗೂ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಹೆಚ್ಚಿನ ಆನಾಹುತವಾಗಿಲ್ಲ ಎಂದು ಹೇಳಲಾಗುತ್ತದೆ.

ಹೊಟ್ಟೆನೋವು: ಮಹಿಳೆ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಕೆ.ಬಸಾಪೂರದಲ್ಲಿ ಹೊಟ್ಟೆನೋವು ತಾಳದೆ ಮಹಿಳೆಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶರಣಮ್ಮ ಮೃತಪಟ್ಟವರು. ಐದಾರು ತಿಂಗಳಿನಿಂದ ಹೊಟ್ಟೆನೋವಿನ ಬಾಧೆಯಿದ್ದು, ಅದರಿಂದ ಬೇಸತ್ತ ಆಕೆ ಮನೆಯಲ್ಲಿರಿಸಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಆಕೆಯನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement