ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಅಲ್ವೇನ್ರೀ ಶಿವರಾಮಗೌಡ್ರೇ...' ಅಂದು ಗಮನ ಸೆಳೆದ ಮುಖ್ಯಮಂತ್ರಿ

Mainashree
Updated On : 26 Aug 2013, 11:16 am

ರಾಯಚೂರು:  'ಕಳೆದ ಸರ್ಕಾರ ಪಡಿತರ ವಿತರಣೆ ವ್ಯವಸ್ಥೆಯಡಿ ಆಹಾರ ಧಾನ್ಯ ಪ್ರಮಾಣ ಕಡಿತಗೊಳಿಸಿತ್ತು. ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಿಲ್ಲ. ಅಲ್ವೇನ್ರೀ ಶಿವರಾಮಗೌಡ್ರೇ...'
ಹೀಗೆಂದು ಸಿಎಂ ಸಿದ್ದರಾಮಯ್ಯ ಸಿಂಧನೂರಿನಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸಂಸದ ಶಿವರಾಮಗೌಡರನ್ನು ಮೇಲಿಂದ ಮೇಲೆ ಪ್ರಶ್ನಿಸುತ್ತಲೇ ಕುಟುಕಿದ ಪ್ರಸಂಗ ನಡೆಯಿತು.
ಕಳೆದ ಸರ್ಕಾರ ಪಡಿತರದಾರರಿಗೆ ವಿತರಿಸಲಾಗುತ್ತಿದ್ದ ಆಹಾರಧಾನ್ಯ ಕಡಿತಗೊಳಿಸಿ ಬಡವರಿಗೆ ಅರೆಬರೆ ಹೊಟ್ಟೆಯಲ್ಲಿ ಜೀವನ ನಡೆಸುವಂತೆ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ 1  ಗೆ ಕೆಜಿ.ಯಂತೆ 30 ಕೆಜಿ ನೀಡುತ್ತಿದೆ. ಅಲ್ವೇನ್ರೀ ಶಿವರಾಮಗೌಡ್ರೇ ಎಂದು ಪ್ರಶ್ನಿಸಿದರು.
ಅದೇ ರೀತಿ ವಿದ್ಯುತ್ ಉತ್ಪಾದನೆಗೆ ಬಿಜೆಪಿ ಸರ್ಕಾರ ಪ್ರಯತ್ನಿಸಲಿಲ್ಲ. ಅದರಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಭಾಗ್ಯ ಜ್ಯೋತಿ ಯೋಜನೆಯಡಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಫಲಾನುಭವಿಗಳಿಗೆ ಒದಗಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಬಿಜೆಪಿ ಸರ್ಕಾರ ಅಲ್ವೇನ್ರೀ ಎಂದು ಮತ್ತೆ ಪ್ರಶ್ನಿಸಿದರು.
ಆದರೆ, ಸಿಎಂ ಸಿದ್ದರಾಮಯ್ಯ ಅವರ ಕುಹಕದ ಪ್ರಶ್ನೆಗಳಿಗೆ ಸಂಸದ ಶಿವರಾಮಗೌಡರು ಮಾತ್ರ ನಗು ನಗುತ್ತಲೇ ಸ್ವೀಕರಿಸಿದ್ದು ಕಂಡುಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement