ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಪಿಐಎಂಎಲ್ ಕಾರ್ಯಕರ್ತರು, ಪೊಲೀಸರ ವಾಗ್ವಾದ

Mainashree
Updated On : 26 Aug 2013, 11:16 am

ಸಿಂಧನೂರು: ತಾಲೂಕಾ ಸಿಪಿಐಎಂಎಲ್ ರೆಡ್ ಪ್ಸಾಗ್ ಹಾಗೂ ಕೆಆರ್‌ಎಸ್‌ನ ನೂರಾರು ಕಾರ್ಯಕರ್ತರು ಭಾನುವಾರ ಪೊಲೀಸ್ ಠಾಣೆಯ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ಸಲ್ಲಿಸಲು ಏಕಾಏಕಿ ಮುಂದಾದಾಗ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಕೆಲಕಾಲ ಉದ್ರಿಕ್ತ ವಾತಾವರಣ ಏರ್ಪಟ್ಟಿತ್ತು.
ಮನವಿಪತ್ರ ಸಲ್ಲಿಸಲು ಎಲ್ಲಾ ಸಂಘಟನೆಗಳಿಗೆ ಹೆಲಿಪ್ಯಾಡ್ ಬಳಿ ವ್ಯವಸ್ಥೆ ಮಾಡಿದ್ದರಿಂದ ಪುನ ಇಲ್ಲಿ ಮನವಿಪತ್ರ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಅಡ್ಡಿಪಡಿಸಿದಾಗ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಪೊಲೀಸ್ ಅಧಿಕಾರಿಗಳು ಕಾರ್ಯಕರ್ತರನ್ನೆಲ್ಲಾ ಚದುರಿಸಿ ಮುಖ್ಯಮಂತ್ರಿಗಳ ವಾಹನ ಹೋಗಲು ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ತಳ್ಳಾಟ ನಡೆದು ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಈ ಸುದ್ದಿನಗರದಾದ್ಯಂತ ಹಬ್ಬಿ ಸಂಜೆಯ ವೇಳೆಗೆ ಮುಖ್ಯಮಂತ್ರಿಗಳ ವಾಹನದ ಮೇಲೆ ಕಾರ್ಯಕರ್ತರು ಚಪ್ಪಲಿ ಎಸೆದರು ಎಂಬ ಹಂತದವರೆಗೆ ಹೋಯಿತು. ಸಂಜೆ ಸಿಪಿಐ ಶೇಖರಪ್ಪ ಅವರನ್ನು ಮಾತನಾಡಿಸಿದಾಗ ಇದೆಲ್ಲ ಕೇವಲ ವದಂತಿ ಯಾವುದೇ ಅಹಿತಕರ ಘಟನೆಗಳು ನಡೆದಿರುವುದಿಲ್ಲ. ಮನವಿ ಪತ್ರ ಸಲ್ಲಿಸಲು ಅವಕಾಶ ನೀಡದೇ ಇರುವುದಕ್ಕೆ ಇಂತಹ ಸುಳ್ಳು ವದಂತಿಗಳನ್ನು ಕೆಲವರು ಹರಿಬಿಟ್ಟಿದ್ದಾರೆ. ಘಟನೆಗೆ ಕಾರಣರಾದ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿರುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement