ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುದ್ದಿ ಸಂಕ್ಷೇಪ

Mainashree
Updated On : 26 Aug 2013, 11:16 am

ಮುಚ್ಚಿದ ರೈತ ಸಂಪರ್ಕ ಕೇಂದ್ರ: ಆರೋಪ
ರಾಯಚೂರು: ಮಾನವಿ ತಾಲೂಕಿನ ಕಲ್ಲೂರು ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಅಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಜಿಪಂ ಸಿಇಒಗೆ ದೂರು ಸಲ್ಲಿಸಲಾಗಿದೆ. ಮಾನವಿ ತಾಲೂಕಿನ ಕಲ್ಲೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಮಿತ್ರಪ್ಪ ಮತ್ತಿತರರು ಈ ಬಗ್ಗೆ ಜಿಪಂಗೆ ದೂರಿತ್ತಿದ್ದು, ಹೋಬಳಿ ಕೇಂದ್ರದಲ್ಲಿ ರೈತ ಸಂಪರ್ಕ ಕೇಂದ್ರವಿದ್ದರೂ ಅದರ ಸಿಬ್ಬಂದಿ ಕೇಂದ್ರದಲ್ಲಿ ಹಾಜರಿರುವುದಿಲ್ಲ ಎಂದು ಆರೋಪಿಸಿದ್ದಾರೆ. ರೈತ ಸಂಪರ್ಕ ಕೇಂದ್ರವು ಮುಚ್ಚಿದ ಸ್ಥಿತಿಯಲ್ಲಿದ್ದು, ಕೂಡಲೇ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಸಿಬ್ಬಂದಿಯನ್ನು ಕೇಂದ್ರ ಸ್ಥಾನದಲ್ಲಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸೂಚಿಸುವಂತೆ ಒತ್ತಾಯಿಸಿದ್ದಾರೆ.
ಅಂಗನವಾಡಿ ಹುದ್ದೆಗೆ ಅರ್ಜಿ
ರಾಯಚೂರು:  ಲಿಂಗಸ್ಗೂರು ತಾಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿಯಿರುವ 3 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 3 ಸಹಾಯಕಿಯರ ಹುದ್ದೆಗೆ ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಸೆ.19 ಕಡೆ ದಿನ. ವಿವರಗಳಿಗೆ ಲಿಂಗಸ್ಗೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿಸಲು ಶಿಶು ಅಭಿವೃದ್ಧಿ ಅಧಿಕಾರಿ ಪ್ರಭಾಕರ್ ತಿಳಿಸಿದ್ದಾರೆ.
ಸಮಾರೋಪ
ರಾಯಚೂರು:  ನಗರದ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2012-13ನೇ ಸಾಲಿನ ರೂಢಿಪಾಠಗಳ ಸಮಾರೋಪ ಸಮಾರಂಭ ನಡೆಯಿತು. ನಗರದ ಮಿಲ್ಟನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಿಲ್ಟನ್ ಶಾಲೆ ಅಧ್ಯಕ್ಷ ವೆಂಕಟೇಶ್, ಶಾಲೆ ಮುಖ್ಯಗುರು ನರಸಿಂಹಲು, ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ.ಜಗದೀಶ್ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು, ಬೋಧಕ ವರ್ಗದವರು ಹಾಜರಿದ್ದರು.
ಬಿಜೆಪಿ ಪುನಹ ಮರಳಲು ಸ್ವಾಗತ: ಹಾಲಪ್ಪಾಚಾರ್
ಸಿಂಧನೂರು: ಬಿಜೆಪಿ ಬಿಟ್ಟವರು ಪುನಃ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್ ಹೇಳಿದರು.  ಅವರು ಶನಿವಾರ 40ನೇ ಕಾಲುವೆ ಬಳಿ ಪಕ್ಷದ ಕಾರ್ಯಾಲಯ ಉದ್ಘಾಟಿಸಿ, ಮಾತನಾಡಿದರು. ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಅಶೋಕ ಉಮಲೂಟಿ, ಕೆಜೆಪಿ ಪಕ್ಷ ಮುಖಂಡ ಶ್ರೀನಿವಾಸರಡ್ಡಿ ಬಿಜೆಪಿಗೆ ಸೇರ್ಪಡೆಯಾದರು.  ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥರಡ್ಡಿ ತೋರಣದಿನ್ನಿ, ಬಿಜೆಪಿ ತಾಲೂಕಾಧ್ಯಕ್ಷ ದೇವೆಂದ್ರಪ್ಪ ಯಾಪಲಪವರ್, ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪೂರ, ಕೊಲ್ಲಾ ಶೇಷಗಿರಿರಾವ್, ನಗರ ಘಟಕ ಅಧ್ಯಕ್ಷ ಮಧ್ವರಾಜ್ ಆಚಾರ್ಯ, ಅಚ್ಚಡಕರ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement