ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೋಟೆಯಲ್ಲಿ ವೀರೇಶ್ವರ ಜಾತ್ರೆ

Lingaraj Badiger
Updated On : 27 Aug 2013, 11:04 am

ಸಿಂಧನೂರು: ನಗರದ ಕೋಟೆ ಬಡಾವಣೆಯಲ್ಲಿ ಸೋಮವಾರ ವೀರೇಶ್ವರ ಜಾತ್ರೆ ಅದ್ಧೂರಿಯಾಗಿ ಜರುಗಿತು.
ಬೆಳಗ್ಗೆ ಸುಮಂಗಲಿಯರು ಕಳಸ, ಕನ್ನಡಿ ಹೊತ್ತು ಗಂಗಾಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಅವರೊಂದಿಗೆ ಡೊಳ್ಳು ಕುಣಿತ, ವೀರಗಾಸೆ ತಂಡದವರು ಮೆರವಣಿಗೆ ಮೂಲಕ ತೆರಳಿದರು. ನಂತರ ಯುವಕರಿಗೆ ಏರ್ಪಡಿಸಿದ್ದ ಗುಂಡು ಎತ್ತುವ ಭಾರದ ಸ್ಪರ್ಧೆ ನಡೆಯಿತು.
ಮಾಜಿ ನಗರಸಭೆ ಸದಸ್ಯ ಶರಣೇಗೌಡ ಬೆನ್ನೂರು, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಪುರಸಭೆ ಮಾಜಿ ಸದಸ್ಯ ತಿಪ್ಪಯ್ಯಸ್ವಾಮಿ, ಅಮರಯ್ಯಸ್ವಾಮಿ, ವೀರಭದ್ರಪ್ಪ ಗಸ್ತಿ, ಬಸಪ್ಪಯ್ಯ ಸಾಲಿಮಠ, ನಾಗಪ್ಪ ಹೊಸಮನಿ, ಮಲ್ಲಪ್ಪ ಪೂಜಾರಿ, ಮಹಾಂತಪ್ಪ ಯರದಿಹಾಳ, ಅಮರೇಶ ಬುಕ್ಸ್ಟಾಲ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement