ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೀಸಲು ಕಲ್ಪಿಸಲು ಸಿಎಂಗೆ ಒತ್ತಾಯ

Lingaraj Badiger
Updated On : 27 Aug 2013, 11:03 am

ಸಿಂಧನೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಅಂಗೀಕರಿಸಿ ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆವಾರು ಮೀಸಲಾತಿ ಕಲ್ಪಿಸುವಂತೆ ಮಾದಿಗ-ಚಲವಾದಿ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿತು.
ಸದಾಶಿವ ಆಯೋಗವು ನೀಡಿದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕು. ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ 15 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಗುತ್ತಿಗೆ ಆಧಾರದ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಶೇಖರಪ್ಪ ಗಿಣಿವಾರ, ವೀರಭದ್ರಪ್ಪ ಮಲ್ಲಾಪುರ, ಆರ್.ಅಂಬ್ರೂಸ್, ಜಿ.ಚೌರಪ್ಪ, ಯಮನಪ್ಪ ಮಲ್ಲಾಪೂರ, ಎಚ್.ಎನ್. ಬಡಿಗೇರ, ಕೆ. ಮರಿಯಪ್ಪ, ಮಹಾದೇವ ಧುಮತಿ, ಹನುಮಂತ ಗೋಮಸರ್, ಸುಭಾಶ ಫ್ರಾಂಕ್ಲಿನ್, ಪಂಪಾಪತಿ ಗುಡದೂರು, ವೆಂಕಟೇಶ ಗಿರಿಜಾಲಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement