ಹರ್ಡಿಕರ್ ಪುಣ್ಯತಿಥಿ ಆಚರಣೆ
ರಾಯಚೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿಯಿಂದ ಡಾ. ಎನ್.ಎಸ್. ಹರ್ಡಿಕರ್ ಅವರ 38ನೇ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರ್ಡಿಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿ, ಹರ್ಡಿಕರ್ ಅವರ ಸಿದ್ಧಾಂತ, ವಿಚಾರ ಧಾರೆಗಳನ್ನು ಪಕ್ಷ ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್, ಬಾಪುಗೌಡ ಹೊನ್ನಕುಣಿ, ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಕೆ. ಶರಣಪ್ಪ, ಕೆ. ಶಾಂತಪ್ಪ ಸೇರಿ ಮತ್ತಿರರಿದ್ದರು.
--