ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಂದವಾಡಗಿ ಏತ ನೀರಾವರಿ ಮೂಲ ಸ್ವರೂಪದಲ್ಲೇ ಜಾರಿಗೊಳಿಸಲು ಮನವಿ

Mainashree
Updated On : 28 Aug 2013, 10:57 am

ಮುದಗಲ್: ಲಿಂಗಸ್ಗೂರು, ಮಾನ್ವಿ ತಾಲೂಕಿನ 47 ಹಳ್ಳಿಗಳ 53 ಸಾವಿರ ಹೆಕ್ಟರ್ ಭೂ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಮೂಲ ಸ್ವರೂಪದಲ್ಲೇ ಜಾರಿಗೊಳಿಸಬೇಕು ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು. ಈ ಯೋಜನೆಯಡಿ ಕೇವಲ 3.75 ಟಿಎಂಸಿ ನೀರು ಹಂಚಿಕೆ ಮಾಡಿ ಕೆಲವೇ ಪ್ರದೇಶವನ್ನು ನೀರಾವರಿ ಮಾಡಲು ನೀರಾವರಿ ನಿಗಮದ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ. ಇದರಿಂದ ಮಾನ್ವಿ ಮತ್ತು ಲಿಂಗಸ್ಗೂರು ತಾಲೂಕಿನ ಬಹತೇಕ ಹಳ್ಳಿಗಳು ನೀರಾವರಿ ಯೋಜನೆಯಿಂದ ವಂಚಿತವಾಗುತ್ತವೆ. ಆದ್ದರಿಂದ ಮೂಲ ಯೋಜನೆ ಪ್ರಕಾರ ಜಾರಿಗೊಳಿಸಿಬೇಕ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಆರ್.ಎಲ್ 552 ಮೂಲ ಯೋಜನೆ ಪ್ರಕಾರ ಹನಿ ನೀರಾವರಿ ಯೋಜನೆ ಮುಖಾಂತರ ನೀರಾವರಿಗೊಳಪಡಿಸಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ನೀರಾವರಿ ನಿಗಮದ ಅಧಿಕಾರಿಗಳು 592 ರ ಯೋಜನೆ ಸಿದ್ದಪಡಿಸಿ ಮೂಲ ಯೋಜನೆಯನ್ನು ತಿರುಚಲಾಗಿದೆ. ಯಾವುದೇ ಕಾರಣಕ್ಕು ಮೂಲ ಯೋಜನೆ ಪ್ರಕಾರ ಯೋಜನೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ನಂದವಾಡಗಿ ಏತ ನೀರಾವರಿ ಯೋಜನೆ ಹೋರಾಟ ಸಮಿತಿ ಅಧ್ಯಕ್ಷ ಲಿಂಗರಾಜ ಭೂಪಾಲ, ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ, ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮುರಾರಿ, ರಮೇಶ ಶಾಸ್ತ್ರಿ, ಬಸವಂತರಾಯ ಕುರಿ, ಶರಣಗೌಡ ಬಯ್ಯಾಪೂರ, ಶರಣಗೌಡ ಬಸ್ಸಾಪೂರ, ಸಿದ್ದಲಿಂಗೇಶ್ವರ ಗೌಡ, ರೈತ ಸಂಘದ ಮುಖಂಡ ಅಮರಣ್ಣ ಗುಡಿಹಾಳ ಸೇರಿದಂತೆ ನೂರಾರು ರೈತ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement